ಬೆಂಗಳೂರು: ಜನತಾ ದಳ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿಸಿದ ‘ಮಿಷನ್ 123’ ಸದ್ದು ಜೋರಾದಂತೆಯೇ ಬಿಜೆಪಿ ಪಾಳಯವು ವ್ಯಂಗ್ಯಾತ್ಮಕ ವ್ಯಾಖ್ಯೆ ನೀಡಿ ಅಪಹಾಸ್ಯ ಮಾಡಿದೆ.
ಜೆಡಿಎಸ್ ಪಕ್ಷ ಹೇಳಿಕೊಳ್ಳುತ್ತಿರುವ ಮಿಷನ್ 123 ವಾಸ್ತವದಲ್ಲಿ ಮಿಶನ್ 123 ಅಲ್ಲ, ಅದು ಮಿಶನ್ 1+2+3 ಎಂದು ಬಿಜೆಪಿ ವ್ಯಾಖ್ಯೆ ನೀಡಿದೆ. 1 ಅಂದ್ರೆ ದೇವೇಗೌಡ, 2 ಅಂದರೆ ಕುಮಾರ ಸ್ವಾಮಿ, ರೇವಣ್ಣ ಮತ್ತು 3 ಅಂದರೆ ಅನಿತಾ, ಪ್ರಜ್ವಲ್, ಸೂರಜ್ ಎಂದು ಬಿಜೆಪಿ ಬಣ್ಣಿಸಿದೆ. 1+2+3=6, ಅಂದರೆ ದೇವೇಗೌಡ ಕುಟುಂಬದ ಗೆಲುವು ಎಂದರೆ ಪಕ್ಷದ ಗೆಲುವೇ ಎಂದು ಪ್ರಶ್ನೆ ಮಾಡಿದೆ.
ಜೆಡಿಎಸ್ಸಿನ ಮಿಷನ್ 123ಯನ್ನು ಅಪಹಾಸ್ಯದಿಂದ ವ್ಯಾಖ್ಯಾನಿಸಿದ ಬಿಜೆಪಿ, ಇದನ್ನು ಕುಟುಂಬವಾದವಲ್ಲದೆ ಮತ್ತೇನನ್ನಬೇಕು ಎಂದು ಕೂಡಾ ಪ್ರಶ್ನಿಸಿದೆ.