ನಾನು ಕಟ್ಟಿ ಬೆಳೆಸಿದ ಪಕ್ಷವೇ ನನಗೆ ಮುಳುವಾಗುತ್ತಿದೆ: ಜನಾರ್ದನ ರೆಡ್ಡಿ

Prasthutha|

ಬಳ್ಳಾರಿ: ನಾನು ಕಟ್ಟಿ ಬೆಳೆಸಿದ ಪಕ್ಷ ನನಗೇ ಮುಳುವಾಯಿತು ಎಂದು ಗಣಿ ಉದ್ಯಮಿ ಜನಾರ್ದನ ರೆಡ್ಡಿ ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾನೇ ಕಟ್ಟಿ ಬೆಳೆಸಿದ ಪಕ್ಷದವರೇ ನನಗೆ ತೊಂದರೆ ಕೊಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಮುಂದಿನ ರಾಜಕೀಯ ನಡೆ ನಿರ್ಧರಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ನವರು ನನ್ನ ಶತ್ರುಗಳಾಗಿರಬಹುದು. ಅವರ ರಾಜಕೀಯ ಧರ್ಮ ನನಗೆ ತೊಂದರೆ ಕೊಟ್ಟಿರಲೂಬಹುದು. ಆದರೆ ನಮ್ಮವರೇ ಈಗ ನನಗೆ ತೊಂದರೆ ಕೊಡುವ ಪರಿಸ್ಥಿತಿಯಲ್ಲಿದ್ದಾರೆ . ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು,ಕೆಲವೇ ದಿನಗಳಲ್ಲಿ ನನ್ನ ರಾಜಕೀಯ ನಡೆ ಏನೆಂಬುವುದನ್ನು  ತಿಳಿಸುತ್ತೇನೆ. ನನ್ನ ಜೊತೆ ಬಳ್ಳಾರಿಯ ಮುಸ್ಲಿಮರು ಕೈ ಜೋಡಿಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ತಿಳಿಸಿದರು.



Join Whatsapp