ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆ ಕ್ಷೇತ್ರದ ಜನರಿಗೆ ಮಾಡಿದ ಮೋಸ: ಜಹೀರ್ ಅಬ್ಬಾಸ್

Prasthutha|

ಗಂಗಾವತಿ: ಕಳೆದ ಬಾರಿ ವಿಧಾನಸಭಾ ಚುನಾವಣೆ ಸಮಯದಲ್ಲಿ ಗಂಗಾವತಿ ನಗರಕ್ಕೆ ಆಗಮಿಸಿದ ಗಾಲಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಇದೀಗ ಜನರಿಗೆ ಮೋಸ ಮಾಡಿದ್ದಾರೆ ಎಂದು SDPI ಜಿಲ್ಲಾ ಉಪಾಧ್ಯಕ್ಷ ಜಹೀರ್ ಅಬ್ಬಾಸ್ ಹೇಳಿದ್ದಾರೆ.

- Advertisement -

ಪ್ರಚಾರದ ವೇಳೆಯಲ್ಲಿ ತಾನು ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ ಎಂದು ನಾಟಕ ಮಾಡಿ ದೊಡ್ಡ ದೊಡ್ಡ ಭಾಷಣ ಮಾಡಿ ಓಟುಗಳನ್ನು ಗಿಟ್ಟಿಸಿಕೊಂಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಇದೀಗ ತನ್ನ ಮೇಲೆ ಇರುವ ಗಣಿ ಹಗರಣಗಳಿಂದ ಕ್ಲೀನ್ ಚಿಟ್ ಪಡೆಯಲು ಕ್ಷೇತ್ರದ ಜನರನ್ನು ಯಾಮಾರಿಸಿ ಮತ್ತೆ ಅದೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಂದು ಶಾಸಕರಾಗಲು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿದ್ದಾರೆ.

ಗಂಗಾವತಿ ಕ್ಷೇತ್ರದ ಜನರು ನಕಲಿ ಮುಖವಾಡ ಧರಸಿದವರನ್ನು ನಂಬದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರ್ಯಾಯ ರಾಜಕೀಯ ಪಕ್ಷವಾದ SDPIಯನ್ನು ಬೆಂಬಲಿಸಬೇಕೆಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.



Join Whatsapp