ಜಮ್ಮು-ಕಾಶ್ಮೀರ | ಸುರಂಗ ಕುಸಿತ: ಅವಶೇಷಗಳಲ್ಲಿ ಸಿಲುಕಿದ 13 ಕಾರ್ಮಿಕರು

Prasthutha|

ಶ್ರೀನಗರ: ರಾಮಬನ್ ಮತ್ತು ರಾಮ್ಸು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಭಾಗ ಕುಸಿದಿದ್ದು, 13 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಇದುವರೆಗೆ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದ್ದು ವಿಪತ್ತು ನಿರ್ವಹಣಾ ಪ್ರಾಧಿಕಾರವು ಇನ್ನೂ 10 ಕಾರ್ಮಿಕರು ಅವಶೇಷಗಳಲ್ಲಿ ಸಿಲುಕಿದ್ದಾರೆ ಎಂದು ಹೇಳಿದೆ.

- Advertisement -

ಸುರಂಗ ನಿರ್ಮಿಸುತ್ತಿರುವ ರಾಮಬಾನ್ ಜಿಲ್ಲೆಯ ಮೇಕರ್ ಕೋಟ್ ಪ್ರದೇಶದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಳಿಯ ಖೂನಿ ನಾಲಾದಲ್ಲಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದು,  ಮಾಹಿತಿಯ ಪ್ರಕಾರ, ಸುರಂಗ ಕುಸಿದ ತಕ್ಷಣ, ಪೊಲೀಸರು ಮತ್ತು ಸೇನೆಯಿಂದ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿವೆ.

 ಈ ಅವಘಡದಲ್ಲಿ ಸುರಂಗದ ಮುಂದೆ ನಿಂತಿದ್ದ ವಾಹನಗಳು, ಬುಲ್ಡೋಜರ್ ಗಳು, ಟ್ರಕ್ ಗಳು ಸೇರಿದಂತೆ ಹಲವು ಯಂತ್ರಗಳಿಗೂ ಹಾನಿಯಾಗಿದೆ. ಲೆಕ್ಕಪರಿಶೋಧನೆಯ ವೇಳೆ ಸುರಂಗದ ಒಂದು ಭಾಗ ಕುಸಿದಿರುವುದಾಗಿ ವರದಿಯಾಗಿದ್ದು, ಅಪಘಾತದಲ್ಲಿ ಸಿಕ್ಕಿಬಿದ್ದಿರುವವರು ಲೆಕ್ಕಪರಿಶೋಧನಾ ಕೆಲಸ ಮಾಡುತ್ತಿರುವ ಕಂಪನಿಯ ಕಾರ್ಮಿಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ

Join Whatsapp