ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ನಾಪತ್ತೆ; ಕಾರಿನಲ್ಲಿ ರಕ್ತದ ಕಲೆ, ಅಪಹರಣ ಶಂಕೆ

Prasthutha|

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯಲ್ಲಿ ಯೋಧರೊಬ್ಬರು ನಾಪತ್ತೆಯಾಗಿದ್ದಾರೆ.

- Advertisement -

ರೈಫಲ್‌ಮ್ಯಾನ್ ಜಾವೇದ್ ಅಹ್ಮದ್ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ಗೆ ಸೇರಿದ್ದು, ಕೆಲವು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ದರು.

ಶನಿವಾರ ಸಂಜೆ 6.30ರ ಸುಮಾರಿಗೆ ಅವರು ಮಾರುಕಟ್ಟೆಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಕಾರಿನಲ್ಲಿ ತೆರಳಿದ್ದರು. ರಾತ್ರಿ 9 ಗಂಟೆಯಾದರೂ ವಾಪಸ್‌ ಬಾರದೇ ಇದ್ದಾಗ ಕುಟುಂಬದವರು ಹುಡುಕಾಡಿದ್ದಾರೆ. ಮಾರುಕಟ್ಟೆಯ ಬಳಿ ಕಾರು ಪತ್ತೆಯಾಗಿದ್ದು, ವರದಿಗಳ ಪ್ರಕಾರ ಅದರಲ್ಲಿ ರಕ್ತದ ಕಲೆಗಳಿವೆ.

- Advertisement -

ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವು ಶಂಕಿತರನ್ನು ಬಂಧಿಸಿದ್ದಾರೆ. 25ರ ಹರೆಯದ ಯೋಧನಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.

Join Whatsapp