‘ಜಾತ್ಯತೀತ’ ಪದದಿಂದಾಗಿ ಭಾರತೀಯ ಆಧ್ಯಾತ್ಮಿಕತೆ ದುರ್ಬಲ: ಕಾಶ್ಮೀರ ಮುಖ್ಯ ನ್ಯಾಯಮೂರ್ತಿ

Prasthutha|

ಹೊಸದಿಲ್ಲಿ: ಸಂವಿಧಾನದಲ್ಲಿ ‘ಜಾತ್ಯತೀತ’ ಎಂಬ ಪದವನ್ನು ಸೇರಿಸಿರುವುದು ಭಾರತೀಯ ಆಧ್ಯಾತ್ಮಿಕತೆಗೆ ಧಕ್ಕೆ ತಂದಿದೆ ಎಂದು ಕಾಶ್ಮೀರ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಹೇಳಿಕೆ ನೀಡಿದ್ದಾರೆ.

- Advertisement -

ಕಾಶ್ಮೀರದಲ್ಲಿ ಅಧಿವಕ್ತ ಪರಿಷತ್ ಎಂಬ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಭೌಮತ್ವ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯಗಳ ಜೊತೆಗೆ ಸಮಾಜವಾದ ಮತ್ತು ಜಾತ್ಯತೀತತೆಯನ್ನು ಸಂವಿಧಾನದಲ್ಲಿ ಸೇರಿಸಿರುವುದು ಆಧ್ಯಾತ್ಮಿಕತೆಯನ್ನು ದುರ್ಬಲಗೊಳಿಸಿದೆ ಎಂದು ಹೇಳಿದರು.

‘ಪಾಂಡವರ ಕಾಲದಿಂದ ಭಾರತವನ್ನು ಮೌರ್ಯರು, ಗುಪ್ತರು, ಮೊಘಲರು ಮತ್ತು ಬ್ರಿಟಿಷರು ಆಳಿದ್ದಾರೆ, ಆದರೆ ಭಾರತವನ್ನು ಎಂದಿಗೂ ಮುಸ್ಲಿಂ ರಾಷ್ಟ್ರ, ಕ್ರಿಶ್ಚಿಯನ್ ರಾಷ್ಟ್ರ ಅಥವಾ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲಿಲ್ಲ. ಬದಲಾಗಿ ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರವೆಂದು ಗುರುತಿಸಲಾಗಿದೆ’ ಎಂದು ಅವರು ಹೇಳಿದರು.

- Advertisement -

“ಜಾತ್ಯತೀತತೆ” ಮತ್ತು “ಸಮಾಜವಾದ” ಪದಗಳು ಸಂವಿಧಾನದ ತಿದ್ದುಪಡಿಯಿಂದ ಬಂದದ್ದಾಗಿದೆ. ಆದರೆ ಸಂವಿಧಾನದ ಪೀಠಿಕೆಯಲ್ಲಿ ಇವುಗಳನ್ನು ಸರಿಯಾದ ಸ್ಥಳದಲ್ಲಿ ಬಳಸಲಾಗಿದೆಯೇ ಮತ್ತು ಈ ತಿದ್ದುಪಡಿ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಮಿತ್ತಲ್ ಹೇಳಿದರು.



Join Whatsapp