ಜಮ್ಮು ಮತ್ತು ಕಾಶ್ಮೀರ: 50 ಮಂದಿ ಕಾಂಗ್ರೆಸ್ ಮುಖಂಡರಿಂದ ರಾಜೀನಾಮೆ

Prasthutha|

ಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ತಾರಾ ಚಂದ್ ಅವರು 50 ಮಂದಿ ಪಕ್ಷದ ಮುಖಂಡರ ರಾಜೀನಾಮೆಯನ್ನು ಒಗ್ಗೂಡಿಸಿ ಪಕ್ಷದ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯವರಿಗೆ ಕಳುಹಿಸಿದ್ದಾರೆ.

- Advertisement -

ಈ 50ಕ್ಕೂನ ಹೆಚ್ಚು ಜನರು ಇತ್ತೀಚೆಗೆ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಗುಲಾಂ ನಬಿ ಆಝಾದ್ ಅವರ ಬೆಂಬಲಿಗರು ಎಂದು ಹೇಳಲಾಗಿದೆ.

ಚಾಂದ್ ಅವರ ಜೊತೆಗೆ ಮಾಜಿ ಮಂತ್ರಿಗಳಾದ ಅಬ್ದುಲ್ ವಾಜಿದ್ ವಾನಿ, ಮನೋಹರಲಾಲ್ ಶರ್ಮಾ, ಘರೂ ರಾಮ್, ಮಾಜಿ ಶಾಸಕ ಬಲವಾನ್ ಸಿಂಗ್ ಮತ್ತಿತರರು ರಾಜೀನಾಮೆ ನೀಡಿರುವುದಲ್ಲದೆ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

- Advertisement -

“ನಾವು ಸೋನಿಯಾ ಗಾಂಧಿಯವರಿಗೆ ಜಂಟಿ ರಾಜೀನಾಮೆ ಪತ್ರ ರವಾನಿಸಿದೆವು” ಎಂದು ಬಲವಾನ್ ಸಿಂಗ್ ತಿಳಿಸಿದರು.

ಮಾಜಿ ಕೇಂದ್ರ ಮಂತ್ರಿ, ಮಾಜಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ 73ರ ಗುಲಾಂ ನಬಿ ಆಝಾದ್ ತಮ್ಮ 50 ವರ್ಷಗಳ ಕಾಂಗ್ರೆಸ್  ಸಂಬಂಧವನ್ನು ಈಗಾಗಲೇ ಮುರಿದುಕೊಂಡಿದ್ದಾರೆ. ಪಕ್ಷವು ಸರ್ವನಾಶದತ್ತ ಸಾಗಿದೆ; ರಾಹುಲ್ ಗಾಂಧಿ ಪಕ್ಷವನ್ನು ನಾಶ ಮಾಡುತ್ತಿದ್ದಾರೆ ಎಂದು ಆಝಾದ್ ಹೇಳಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಮಟ್ಟದಿಂದಲೂ ಹಲವರು ಆಝಾದ್ ಪರ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.



Join Whatsapp