ಜಾಮಿಯಾ ಮಿಲ್ಲಿಯಾ ಹಿಂಸಾಚಾರ ಪ್ರಕರಣ: ಶಾರ್ಜೀಲ್ ಇಮಾಮ್, ಆಸಿಫ್ ಇಕ್ಬಾಲ್ ತನ್ಹಾ ಖುಲಾಸೆ

Prasthutha|

ನವದೆಹಲಿ: 2019ರ ಡಿಸೆಂಬರ್’ನಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಶನಿವಾರ ಜೆಎನ್’ಯು ವಿದ್ಯಾರ್ಥಿಗಳಾದ ಶಾರ್ಜೀಲ್ ಇಮಾಮ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಖುಲಾಸೆಗೊಳಿಸಿದೆ.

- Advertisement -


ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರುಳ್ ವರ್ಮಾ ಅವರು ಈ ಆದೇಶ ನೀಡಿದರು.


ಇವರಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 149, 186, 353, 332, 333, 308, 427, 435, 323, 341, 120 ಬಿ ಮತ್ತು 34 ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಆದಾಗ್ಯೂ, 2020 ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾದ ಇತರ ಎಫ್’ಐಆರ್’ಗಳಲ್ಲಿ ಇಮಾಮ್ ಇನ್ನೂ ಬಂಧನದಲ್ಲಿದ್ದಾರೆ. 2020 ರ ಈಶಾನ್ಯ ದೆಹಲಿ ಗಲಭೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪಿಸಿ ದಾಖಲಿಸಲಾದ ಪ್ರಕರಣಗಳಲ್ಲಿ ಇಮಾಮ್ ಮತ್ತು ತನ್ಹಾ ಆರೋಪಿಗಳಾಗಿದ್ದಾರೆ.

Join Whatsapp