ಮುಸ್ಲಿಂ ಪ್ರತಿಭಟನಾಕಾರರ ನಿವಾಸಗಳ ಮೇಲಿನ ಧ್ವಂಸ ಕ್ರಿಯೆಯನ್ನು ನ್ಯಾಯಾಂಗ ತನಿಖೆಗೊಳಪಡಿಸಲು ಜಮಾತ್-ಎ-ಇಸ್ಲಾಮಿ ಹಿಂದ್ ಆಗ್ರಹ

Prasthutha|

ನವದೆಹಲಿ: ಪ್ರವಾದಿ ಮುಹಮ್ಮದ್ ರನ್ನು ನಿಂದಿಸಿದರ ವಿರುದ್ಧ ರಾಂಚಿ, ಪ್ರಯಾಗ್‌ರಾಜ್ ಮತ್ತು ದೇಶದ ಇತರ ಭಾಗಗಳಲ್ಲಿ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವ ಸರಕಾರದ ಮತ್ತು ಪೊಲೀಸರ ನಡೆಯನ್ನು ಜಮಾತೆ ಇಸ್ಲಾಮಿ ಹಿಂದ್ ತೀವ್ರವಾಗಿ ಖಂಡಿಸಿದೆ.

- Advertisement -

ಕಸ್ಟಡಿ ಚಿತ್ರಹಿಂಸೆ, ಪೊಲೀಸ್ ಕಿರುಕುಳ ಮತ್ತು ಮುಸ್ಲಿಂ ಪ್ರತಿಭಟನಾಕಾರರ ಮನೆಗಳನ್ನು ಗುರಿಪಡಿಸಿ ಬುಲ್ಡೋಝರ್ ಧ್ವಂಸ ಕ್ರಿಯೆಗಳ ಬಗ್ಗೆ ನಿಷ್ಪಕ್ಷಪಾತವಾಗಿ ನ್ಯಾಯಾಂಗ ತನಿಖೆ ನಡೆಸಲು ಜೆಐಎಚ್ ಆಗ್ರಹಿಸಿದೆ.

ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ಮತ್ತು ಪ್ರತಿಭಟನೆಗಳ ಸಂದರ್ಭದಲ್ಲಿ ಸಮಾಜ ವಿರೋಧಿ ಶಕ್ತಿಗಳ ಬಲೆಗೆ ಬೀಳದೆ ಎಚ್ಚರವಹಿಸುವಂತೆ ಮುಸ್ಲಿಂ ಸಮುದಾಯಕ್ಕೆ ಜಮಾತೆ ಇಸ್ಲಾಮಿ ಹಿಂದ್ ಮನವಿ ಮಾಡಿದೆ.



Join Whatsapp