ಚೆನ್ನೈ: ಜಲ್ಲಿಕಟ್ಟು ವೀಕ್ಷಿಸಲು ಬಂದಿದ್ದ 14 ವರ್ಷದ ಬಾಲಕ ಗೂಳಿಯೊಂದರ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ತಮಿಳುನಾಡಿನ ಧರ್ಮಪುರಿಯ ತಡಂಗಂ ಗ್ರಾಮದಲ್ಲಿ ನಡೆದಿದೆ.
ಗೂಳಿ ದಾಳಿಗೆ ಬಲಿಯಾದ ಬಾಲಕನನ್ನು ಗೋಕುಲ್ ಎಂದು ಗುರುತಿಸಲಾಗಿದೆ.
ಗೋಕುಲ್ ತನ್ನ ಸಂಬಂಧಿಕರೊಂದಿಗೆ ಜಲ್ಲಿಕಟ್ಟು ವೀಕ್ಷಿಸಲು ತೆರಳಿದ್ದ ವೇಳೆ ಗೂಳಿಯೊಂದು ಆತನ ಹೊಟ್ಟೆಗೆ ತಿವಿದಿದ್ದು, ಬಾಲಕ ತೀವ್ರವಾಗಿ ಗಾಯಗೊಂಡಿದ್ದರು.
ಕೂಡಲೇ ಗೋಕುಲ್ ನನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಗೋಕುಲ್ ಈ ವರ್ಷ ಜಲ್ಲಿಕಟ್ಟು ಸಂಬಂಧ ಸಾವನ್ನಪ್ಪಿದ ನಾಲ್ಕನೇ ವ್ಯಕ್ತಿಯಾಗಿದ್ದಾರೆ.
ಧರ್ಮಪುರಿ ಪೊಲೀಸರು ತನಿಖೆ ಆರಂಭಿಸಿದ್ದು, ಗೋಕುಲ್ ಹೇಗೆ ಗಾಯಗೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.