M.I.S.A ಕೊರಿಂಗಿಲ ಸೌದಿ ಘಟಕದ ಅಧ್ಯಕ್ಷರಾಗಿ ಜಲೀಲ್ ಕೇಕಾನಜೆ ಆಯ್ಕೆ

Prasthutha|

M.I.S.A ಕೊರಿಂಗಿಲ ಸೌದಿ ಘಟಕದ ಅಧ್ಯಕ್ಷರಾಗಿ ಜಲೀಲ್ ಕೇಕಾನಜೆ ಆಯ್ಕೆಯಾದರು.

- Advertisement -

ಸಂಸ್ಥೆಯ 2023-24 ರ ಸಾಲಿನ ಮಹಾಸಭೆಯು ಸೆ.19(ಮಂಗಳವಾರ)ರಂದು ವಾಟ್ಸಾಪ್ ಮುಖಾಂತರ ಶರೀಫ್ ಕುಕ್ಕುವಳ್ಳಿ ಅದ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಝಕಾರಿಯಾ ಕೊರಿಂಗಿಲ ಸ್ವಾಗತಿಸಿದರು. ಲತೀಫ್ ಕಲ್ಮರ ಪ್ರಾರ್ಥನೆಗೆ ನೇತೃತ್ವ ನೀಡಿದರು. ಪ್ರಧಾನ ಕಾರ್ಯದರ್ಶಿ ಜಾಬಿರ್ ಕೇಕಾನಜೆ ಕಳೆದ ವರ್ಷದ ವರದಿಯನ್ನು ವಾಚಿಸಿದರು. ನಂತರ ಹೊಸ ಸಮಿತಿಯನ್ನು ರಚಿಸಲಾಯಿತು.

- Advertisement -

M.I.S.A ಕೋರಿಂಗಿಲ ಸೌದಿ ಘಟಕ ಇದರ ನೂತನ ಸಾರಥಿಗಳು

ಮುಖ್ಯ ಸಲಹೆಗಾರರು- ಲತೀಫ್ ಕಲ್ಮರ

ಅಧ್ಯಕ್ಷರು-  ಜಲೀಲ್ ಕೇಕಾನಜೆ

ಉಪಾಧ್ಯಕ್ಷರು- ಉದೈಫ್ ಕೊರಿಂಗಿಲ

ಪ್ರಧಾನ ಕಾರ್ಯದರ್ಶಿ-ಅಮ್ಮಿ ಕೊರಿಂಗಿಲ

ಜೊತೆ ಕಾರ್ಯದರ್ಶಿಗಳು- ಜಮ್ಮಿ ಕೊರಿಂಗಿಲ

ಕೋಶಾಧಿಕಾರಿ-ಶಫೀಕ್ ಕೊರಿಂಗಿಲ

25 ಸದಸ್ಯರನ್ನು M.i.S.A ಸೌದಿ ಘಟಕದ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

 ಝಮ್ಮಿ ಕೊರಿಂಗಿಲ ಧನ್ಯವಾದಗೈದರು. ಕೊನೆಗೆ ಮೂರು ಸ್ವಲಾತಿನೊಂದಿಗೆ ಮೀಟಿಂಗ್ ಮುಕ್ತಾಯಗೊಳಿಸಲಾಯಿತು.

Join Whatsapp