ಮದುಮಗನಿಂದ ಗೆಳೆಯನ ಹತ್ಯೆ: ಹಸೆಮಣೆ ಏರಬೇಕಾದ ವರ ಜೈಲು ಪಾಲು

Prasthutha|

ಉತ್ತರ ಪ್ರದೇಶ: ಮದುವೆ ಮಂಟಪದಲ್ಲಿ ವರನ ಬಂದೂಕಿನಿಂದ ಸಿಡಿದ ಗುಂಡಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಉತ್ತರ ಪ್ರದೇಶದ ಸೋನಭದ್ ಜಿಲ್ಲೆಯಲ್ಲಿ ನಡೆದಿದ್ದು,  ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಮನೀಶ್ ಮಧೇಶಿಯಾ ಬಂಧಿತ ವರ ಎಂದು ಗುರುತಿಸಲಾಗಿದೆ. ವರನು ತನ್ನ ಮದುವೆ ದಿಬ್ಬಣದ ರಥದ ಮೇಲೆ ನಿಂತುಕೊಂಡಿದ್ದಾಗ, ಸಂಭ್ರಮಾಚರಣೆಗಾಗಿ ಗುಂಡು ಹಾರಿಸಿದ್ದಾನೆ.

ಈ ವೇಳೆ ಹಾರಿದ ಗುಂಡು ಅಲ್ಲೇ ಇದ್ದ ತನ್ನ ಸ್ನೇಹಿತ, ಯೋಧ ಬಾಬು ಲಾಲ್ ಯಾದವ್ ಗೆ ತಗುಲಿದೆ. ವರ ಮನೀಶ್ ಬಳಸಿದ ಗನ್ ಲಾಲ್ ಯಾದವ್ ಅವರದ್ದು ಎಂದು ವರದಿಯಾಗಿದೆ.

Join Whatsapp