ಯಾರನ್ನೂ ನೋಯಿಸುವ ಉದ್ದೇಶವಿಲ್ಲ: ‘ಜೈ ಭೀಮ್’ ಚಿತ್ರದ ನಿರ್ದೇಶಕ ಜ್ಞಾನವೇಲ್ ವಿಷಾದ

Prasthutha|

ಚೆನ್ನೈ: ಯಾವುದೇ ನಿರ್ದಿಷ್ಟ ಸಮುದಾಯವನ್ನು ನೋಯಿಸುವ ಅಥವಾ ಕೆಟ್ಟದಾಗಿ ಬಿಂಬಿಸುವ ಉದ್ದೇಶ ಖಂಡಿತವಾಗಿಯೂ ಇಲ್ಲ. ಚಿತ್ರದ ಯಾವುದೇ ದೃಶ್ಯವು ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ‘ಜೈ ಭೀಮ್’ ಚಿತ್ರದ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಹೇಳಿದ್ದಾರೆ.

- Advertisement -

ಈ ಕುರಿತು ಎರಡು ಪುಟಗಳ ಪತ್ರ ಬರೆದಿರುವ ಜ್ಞಾನವೇಲ್, ಚಿತ್ರದಲ್ಲಿ ನೇತಾಡುವ ಕ್ಯಾಲೆಂಡರ್ ಸಮುದಾಯವನ್ನು ಉಲ್ಲೇಖಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಇದನ್ನು ಒಂದು ನಿರ್ದಿಷ್ಟ ಸಮುದಾಯದ ಉಲ್ಲೇಖದ ಸಂಕೇತವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ.ಅದು 1995 ರ ಅವಧಿಯನ್ನು ಪ್ರತಿಬಿಂಬಿಸುವುದಾಗಿದೆ.ಮನನೊಂದವರಿಗೆ ಮತ್ತು ದುಃಖಿತರಿಗೆ ನನ್ನ ಹೃತ್ಪೂರ್ವಕ ವಿಷಾದವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಚಿತ್ರೀಕರಣ ಅಥವಾ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ, ಕೆಲವು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುವ ಕ್ಯಾಲೆಂಡರ್ ದೃಶ್ಯಗಳು ನಮ್ಮ ಗಮನವನ್ನು ಸೆಳೆಯಲಿಲ್ಲ, ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗುವ ಮೊದಲು, ಅದನ್ನು ಹಲವಾರು ಜನರಿಗೆ ಪ್ರದರ್ಶಿಸಲಾಗಿತ್ತು.ಆ ಸಮಯದಲ್ಲಿ ಅದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಚಿತ್ರ ಬಿಡುಗಡೆಯಾದ ನಂತರ, ನ.2ರಂದು ಕ್ಯಾಲೆಂಡರ್’ನಲ್ಲಿದ್ದ ಅಗ್ನಿಕುಂಡದ ಬದಲು ಬೇರೆ ಚಿತ್ರ ಹಾಕಲು ಕ್ರಮಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

- Advertisement -

ವಿವಾದದ ಹಿನ್ನೆಲೆಯಲ್ಲಿ ನಾಯಕ ನಟ ಮತ್ತು ಜೈ ಭೀಮ್ ನಿರ್ಮಾಪಕ ಸೂರ್ಯ ಅವರಿಗೆ ಉಂಟಾದ ಕಷ್ಟಕ್ಕೆ ಚಿತ್ರ ನಿರ್ದೇಶಕ ವಿಷಾದ ವ್ಯಕ್ತಪಡಿಸಿದ್ದಾರೆ. ಸೂರ್ಯ’ರನ್ನು ಜವಾಬ್ದಾರಿಯನ್ನು ಹೊರುವಂತೆ ಕೇಳುವುದು ದುರದೃಷ್ಟಕರ. ನಿರ್ದೇಶಕನಾಗಿ, ಇದು ನನ್ನ ಮಾತ್ರ ಜವಾಬ್ದಾರಿ ಮಾತ್ರ ಎಂದಿದ್ದಾರೆ.

ನವೆಂಬರ್ 1ರಂದು ತಮಿಳು ಮತ್ತು ತೆಲುಗು ಸೇರಿದಂತೆ ಭಾಷೆಗಳಲ್ಲಿ ಬಿಡುಗಡೆಯಾದ ‘ಜೈ ಭೀಮ್’ ನಲ್ಲಿ ತಮಿಳುನಾಡಿನ ವನ್ನಿಯಾರ್ ಸಂಗಮ್ ಸಮುದಾಯದ ಸದಸ್ಯರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ವಿವಾದವಾಗಿತ್ತು. ಬಳಿಕ ಸೂರ್ಯ ಅವರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು. ಚಿತ್ರದ ವಿರುದ್ಧ ವನ್ನಿಯಾರ್ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು.



Join Whatsapp