ಜಗನ್ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ: ಪವನ್ ಕಲ್ಯಾಣ್

Prasthutha|

ಅಮರಾವತಿ: ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ (ವೈಎಸ್ ಆರ್ ಸಿಪಿ) ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದು ನಟ, ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಹೇಳಿದ್ದಾರೆ.

- Advertisement -

ಗುಂಟೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನಸೇನಾ ಪಕ್ಷದ ಬೆಂಬಲಿಗರ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಮಾತನಾಡಿದ ಅವರು ಈ ಧ್ವಂಸದಿಂದಲೇ ಸರ್ಕಾರದ ಪತನವು ಆರಂಭವಾಗಿದೆ. ಈ ಸರ್ಕಾರ ಬಹಳ ದಿನಗಳವರೆಗೆ ಇರುವುದಿಲ್ಲ ಎಂದರು.

ಗ್ರಾಮ ಒತ್ತುವರಿ ನೆಪದಲ್ಲಿ ಯಾವುದೇ ನೋಟಿಸ್‌ ನೀಡದೆ ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಬಹುಪಾಲು ಮನೆಗಳು ಜನಾಸೇನಾ ಪಕ್ಷದ ಬೆಂಬಲಿಗರ ಮನೆಗಳು ಎಂದು ವರದಿಯಾಗಿದೆ.



Join Whatsapp