ಕಲಬುರಗಿ: ‘ಕೇಂದ್ರ ಸರ್ಕಾರ ಜಗದೀಶ್ ಶೆಟ್ಟರ್ ಅವರಿಗೆ ಐಟಿ, ಇಡಿ ಭಯ ತೋರಿಸಿದ್ದರಿಂದ ಅವರು ದಿಢೀರ್ ಆಗಿ ಬಿಜೆಪಿ ಸೇರ್ಪಡೆಯಾಗಿರಬಹುದು‘ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಐಟಿ, ಇಡಿ, ಸಿಬಿಐಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ಶೆಟ್ಟರ್ ಅವರನ್ನು ಸೆಳೆಯಲು ಇದೇ ತಂತ್ರ ಅನುಸರಿಸಿರಬಹುದು. ಶೆಟ್ಟರ್ ಅವರನ್ನು ನಮ್ಮ ಪಕ್ಷ ಗೌರವಯುತವಾಗಿಯೇ ನಡೆಸಿಕೊಂಡಿತ್ತು. ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ ವಿಧಾನಪರಿಷತ್ ಸ್ಥಾನವನ್ನು ನೀಡಲಾಗಿತ್ತು‘ ಎಂದರು.
‘ಬಿಜೆಪಿಗೆ ಇಡಿ, ಐಟಿ, ಸಿಬಿಐಗಳೇ ಸ್ಟಾರ್ ಕ್ಯಾಂಪೇನರ್ಗಳಾಗಿದ್ದಾರೆ. ಇವುಗಳನ್ನು ಬಿಟ್ಟರೆ ಬಿಜೆಪಿಯವರಿಗೆ ಗತಿ ಇಲ್ಲ. ತಾಕತ್ತಿದ್ದರೆ ವಿರೋಧ ಪಕ್ಷಗಳ ನಾಯಕರ ಮೇಲೆ ಇಡಿ, ಐಟಿಗಳನ್ನು ಛೂ ಬಿಡದೇ ಚುನಾವಣೆ ಎದುರಿಸಲಿ ನೋಡೋಣ‘ ಎಂದು ಸವಾಲು ಹಾಕಿದರು.