ದ.ಕ ದಲ್ಲಿ ಅನ್‌ಲಾಕ್ ಆಗದಿರುವುದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳೇ ಕಾರಣ : ಐವನ್ ಡಿಸೋಜಾ ಆಕ್ರೋಶ

Prasthutha|

ಮಂಗಳೂರು : ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದರಿಂದ ಅನ್ ಲಾಕ್ ಆಗಬೇಕಿದ್ದ ದಕ್ಷಿಣ ಕನ್ನಡ ಜಿಲ್ಲೆ ಇನ್ನೂ ಲಾಕ್ ಆಗಿದೆ. ಇದಕ್ಕೆ ಜಿಲ್ಲೆಯ ಅಧಿಕಾರಿಗಳು, ಶಾಸಕರು ಸಂಸದರು ಕಾರಣ ಎಂದು ಮಾಜಿ ಎಂಎಲ್ಸಿ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಿದ್ರೂ ಅನ್ ಲಾಕ್ ಆಗಿದೆ. ಆದ್ರೆ ದ.ಕ ಜಿಲ್ಲೆ ಇನ್ನೂ ಲಾಕ್ ಡೌನ್ ಆಗಿದೆ. ಇದಕ್ಕೆ ಜಿಲ್ಲೆಯ ಅಧಿಕಾರಿಗಳು, ಶಾಸಕರು ಸಂಸದರು ಕಾರಣ. ಈ‌ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳ ವೈಫಲ್ಯವೇ ಇದಕ್ಕೆಲ್ಲಾ ಕಾರಣ. ಉಡುಪಿಯ ಶಾಸಕರು ಅನ್ ಲಾಕ್ ಮಾಡುವ ಬಗ್ಗೆ ಸರ್ಕಾರಕ್ಕೆ ಕೇಳುತ್ತಾರೆ. ಇಲ್ಲಿನ ಶಾಸಕರಿಗೆ ಯಾಕೆ ಆಗಲ್ಲ? ಇಲ್ಲಿನ ಶಾಸಕರು ಏನು ತೆಪ್ಪು ಗುದ್ದುತ್ತಿದ್ದಾರ? ಈ ಭಾಗದ ಶಾಸಕರು ಏನು ದನ ಮೇಯಿಸುವ ಕೆಲಸ ಮಾಡ್ತಾ ಇದ್ದಾರಾ? ಉಡುಪಿ ಶಾಸಕರಿಗೆ ಆಗುವ ಕೆಲಸ ಇವ್ರಿಗೆ ಯಾಕೆ ಆಗಲ್ಲ? ಎಂದು ಪ್ರಶ್ನಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಅಲ್ಲಿ ಅಲ್ಲಿ ಎಲ್ಲೂರಿಗೂ ಲಸಿಕೆ ಉಚಿತ ಎಂಬ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಆದ್ರೆ ಇಲ್ಲಿ ಕೇವಲ ಹಣ ನೀಡಿದವರಿಗೆ ಲಸಿಕೆ ಸಿಗುತ್ತಿದ್ದು, ಉಚಿತ ಲಸಿಕೆ ನೀಡುವ ಮೊದಲೇ ಅಲ್ಲಲ್ಲಿ ಬ್ಯಾನರ್ ಹಾಕಿದ್ದಾರೆ. ಕೇವಲ ಪ್ರಚಾರಕ್ಕೆ ಮಾತ್ರ ಬ್ಯಾನರ್ ಹಾಕಿದ್ದಾರೆ. ಆದರೆ ಲಸಿಕೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಾಗಿದೆ. ಕೂಡಾಲೇ ಈ ಬ್ಯಾನರ್ ತೆರವುಗೊಳಿಸಬೇಕು. ನಮ್ಮ ಹಣದಿಂದ ಲಸಿಕೆ ನೀಡಿ ಅದಕ್ಕೂ ಬ್ಯಾನರ್ ಹಾಕಿ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

- Advertisement -

ಲಸಿಕಾ ಕೇಂದ್ರದಲ್ಲಿ 18ರಿಂದ 45 ವರ್ಷದ ಎಲ್ಲರಿಗೂ ಲಸಿಕೆ ನೀಡಬೇಕು. ಜಿಲ್ಲೆಯಲ್ಲಿ ಮದುವೆ ಸಮಾರಂಭ ಸಭಾಂಗಣದಲ್ಲಿ ನಡೆಸಲು ಅನುಮತಿ ನೀಡಲಿ. ಬಿಜೆಪಿ ಕಾರ್ಯಕ್ರಮದಲ್ಲಿ ಎಷ್ಟು ಮಂದಿ ಸೇರಿದರೂ ಸಮಸ್ಯೆ ಇಲ್ಲ. ದಾಳಿಯನ್ನೂ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ಏಳನೇ ವರ್ಷದ ಕಾರ್ಯಕ್ರಮದಲ್ಲಿ ಜನ ಸಂದಣಿ ಸೇರಿದ್ರು ಸಮಸ್ಯೆ ಇಲ್ಲ. ಜನ ಸಾಮಾನ್ಯನ ಮದುವೆಯಲ್ಲಿ 50 ಮಂದಿ ಸೇರಿದರೆ ದಾಳಿ ಮಾಡಿ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಯಾವ ನ್ಯಾಯ? ಇದನ್ನು ಜಿಲ್ಲಾ  ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಕೊರೋನಾ ಸೊಂಕಿಗೆ ಬಲಿಯಾದ ಬಿಪಿಎಲ್ ಕುಟುಂಬಗಳಿಗೆ ಒಂದು ಲಕ್ಷ ಪರಿಹಾರ ನೀಡುತ್ತೇವೆ ಎಂದು ಸರಕಾರ ಹೇಳಿತ್ತಿದೆ. ಕೊರೋನಾ ಬಿಪಿಎಲ್ ಕಾರ್ಡುದಾರರನ್ನು ನೋಡಿ ಬರುವುದಿಲ್ಲ. ಈ ಬಗ್ಗೆ ಸರ್ಕಾರ ಎಲ್ಲರಿಗೂ ಐದು ಲಕ್ಷ ಪರಿಹಾರ ನೀಡಬೇಕು. ಒಂದು ಲಕ್ಷ ರಾಜ್ಯ ಸರ್ಕಾರದಿಂದ ನಾಲ್ಕು ಲಕ್ಷ ಕೇಂದ್ರದಿಂದ ನೀಡಲಿ. ಈಗಿನ ಸರ್ಕಾರ ನರಸತ್ತ ಜನ್ರಂತೆ ಸಿಖಂಡಿ ಸರ್ಕಾರವಾಗಿದೆ ಎಂದು ಐವನ್ ಡಿಸೋಜಾ ಕಿಡಿಕಾರಿದ್ದಾರೆ.



Join Whatsapp