ಕ್ರೈಸ್ತ ಸಮುದಾಯದ ಬಗ್ಗೆ ಸಂಸದೆ ಶೋಭಾ ಸುಳ್ಳು ಆರೋಪ : ಐವನ್ ಡಿಸೋಝಾರಿಂದ ಡಿಸಿಪಿಗೆ ದೂರು

Prasthutha|

ಕ್ರೈಸ್ತ ಸಮುದಾಯದ ಬಗ್ಗೆ ಸುಳ್ಳು ಹೇಳಿಕೆ ನೀಡಿ, ತನ್ನ ತಪ್ಪನ್ನು ಮುಚ್ಚಿಡಲು ಪ್ರಯತ್ನಿಸುತ್ತಿರುವ ಸಂಸದೆ ಶೋಭಾ ಅವರು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದಾರೆ. ಜಾತಿ ಆಧಾರದ ಮೇಲೆ ಸಮಾಜವನ್ನು ವಿಂಗಡಿಸಿ ತಮ್ಮ ಅಸ್ತಿತ್ವವನ್ನು ಉಳಿಸುವ ಬಗ್ಗೆ ಪ್ರಯತ್ನಿಸುತ್ತಿರುವ ಸಂಸದೆ ಮೇಲೆ ಕೂಡಲೇ ಕೇಸು ದಾಖಲಿಸಬೇಕು ಮತ್ತು ಅವರನ್ನು ಬಂಧಿಸಬೇಕೆಂದು ಡಿಸಿಪಿಗೆ ಮತ್ತು ಪಾಂಡೇಶ್ವರ ಪೊಲೀಸ್ ನಿರೀಕ್ಷಕರಿಗೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಝಾ ನೇತೃತ್ವದಲ್ಲಿ ದೂರು ನೀಡಲಾಗಿದೆ.

    ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರರಾವ್, ಆಶಿತ್ ಪಿರೇರಾ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ರೋಷನ್ ರೈ, C M ಮುಸ್ತಫ, ಆರೀಫ್ ಬಾವ, ಸಲೀಂ ಮುಕ್ಕ, ಮಿಲಾಜ್, ಯೂಸುಫ್ ಉಚ್ಚಿಲ, ಬಾಜಿಲಾ, ಹಬೀಬುಲ್ಲಾ ಕಣ್ಣೂರ್ ಮುಂತಾದವರು ಉಪಸ್ಥಿತರಿದ್ದರು.

- Advertisement -