ಕೆತ್ತಿಕಲ್ | ನೋಡಿದ್ರೆ ಭಯವಾಗುತ್ತೆ, ಗುಡ್ಡ ಕುಸಿದ್ರೆ ತಡೆಯೋದು ಹೇಗೆ? : ಅಧಿಕಾರಿಗಳಿಗೆ ಗುಂಡೂರಾವ್ ತೀವ್ರ ತರಾಟೆ

Prasthutha|

ಮಂಗಳೂರು: ನೋಡಿದ್ರೆ ಭಯವಾಗುತ್ತೆ. ಇದನ್ನು ತಡೆಯೋದು ಹೇಗೆ. ನೀವೆಲ್ಲ ಕಣ್ಮುಚ್ಚಿಕೊಂಡಿದ್ದೀರಾ ಎಂದು ಅಧಿಕಾರಿಗಳನ್ನು ಜಿಲ್ಲಾ ಉಸ್ತವಾರಿ ಸಚಿವ ದಿನೇಶ್ ಗುಂಡೂರಾವ್ ತೀವ್ರ ಪ್ರಶ್ನೆ ಮಾಡಿದರು.

- Advertisement -


ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಸಚಿವರು ಅಲ್ಲಿನ ಭೀಕರತೆ ಕಂಡು ದಂಗಾದರು.


ಸ್ಥಳದಲ್ಲಿದ್ದ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳನ್ನು ಸಚಿವರು ಪ್ರಶ್ನೆ ಮಾಡಿದ್ದು, ಈ ಪರಿ ಗುಡ್ಡವನ್ನು ಅಗೆದು ಹಾಕಿದ್ದಾರೆ. ಹೆದ್ದಾರಿ ನಿರ್ಮಾಣಕ್ಕಾದರೇನು, ಇಷ್ಟೊಂದು ಗುಡ್ಡವನ್ನು ನೇರವಾಗಿ ಅಗೆದರೆ ಮೇಲ್ಭಾಗದಲ್ಲಿರುವ ಜನ ಏನ್ಮಾಡಬೇಕು. ಎದ್ದು ಹೋಗಬೇಕಾ. ಅವರಿಗೇನು ವ್ಯವಸ್ಥೆ ಮಾಡುತ್ತೀರಿ. ಹೀಗೆಲ್ಲ ಗುಡ್ಡ ಅಗೆಯುವುದಕ್ಕೆ ಪರ್ಮಿಶನ್ ಹೇಗೆ ಕೊಟ್ಟಿರಿ ಎಂದು ಅಧಿಕಾರಿಗಳನ್ನು ತರಾಟೆ ಮಾಡಿದ್ದಾರೆ.

- Advertisement -


ಗುಡ್ಡದ ಮಣ್ಣನ್ನು ಅವ್ಯಾಹತವಾಗಿ ಅಗೆದು ಸಾಗಿಸಿರುವ ಬಗ್ಗೆ ಸ್ಥಳೀಯರು ದೂರಿದಾಗ, ಈ ಬಗ್ಗೆ ಕೇಂದ್ರದಿಂದ ಬರುವ ಉನ್ನತ ಮಟ್ಟದ ತಾಂತ್ರಿಕ ತಂಡ ನೀಡುವ ವರದಿ ಆಧಾರದಲ್ಲಿ ಕ್ರಮ ವಹಿಸುವುದಾಗಿ ಸಚಿವರು ಭರವಸೆ ನೀಡಿದರು.


ಮೇಲ್ನೋಟಕ್ಕೆ ಕೆತ್ತಿಕಲ್ ನಲ್ಲಿ ಗುಡ್ಡದ ಭಯಾನಕ ಸ್ಥಿತಿ, ಹಾನಿಗೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದಲೇ ಶೇ.90ರಷ್ಟು ಹಾನಿ ಆಗಿರುವುದು ಕಂಡು ಬರುತ್ತಿದೆ. ತಜ್ಞರ ತಂಡ ಅಧ್ಯಯನ ವರದಿಯನ್ನು ಆಧರಿಸಿ ಮುಂದಿನ ಕ್ರಮ ವಹಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.



Join Whatsapp