ಇದು ಉತ್ತರ ಪ್ರದೇಶವಲ್ಲ, ಬಂಗಾಳ: ಬಿಜೆಪಿಗೆ ‘ದೀದಿ’ ಟಾಂಗ್

Prasthutha|

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದು ಉತ್ತರ ಪ್ರದೇಶವಲ್ಲ, ಪಶ್ಚಿಮ ಬಂಗಾಳ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.

- Advertisement -

ಟಿಎಂಸಿ ನಿಯೋಗವು ಉತ್ತರ ಪ್ರದೇಶದ ಹತ್ರಾಸ್‌ ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶಕ್ಕೆ ತೆರಳಿತ್ತು, ಆದರೆ ಯೋಗಿ ಸರಕಾರವು ನಿಯೋಗವನ್ನು ತಡೆದಿತ್ತು. ಆದರೆ ನಮ್ಮಲ್ಲಿ ಆ ರೀತಿಯ ಸಮಸ್ಯೆಗಳಿಲ್ಲ, ರಾಜ್ಯಕ್ಕೆ ಬರುವ ಯಾವ ನಿಯೋಗವನ್ನು ತಡೆಯುವುದಿಲ್ಲ ಎಂದು ಮಮತಾ ಹೇಳಿದ್ದಾರೆ.

ದೇಶದ ನಾನಾ ರಾಜ್ಯಗಳಲ್ಲಿ ಈ ರೀತಿಯ ಇಂತಹ ಘಟನೆಗಳು ನಡೆದಿವೆ. ರಾಮ್‌ಪುರಹಾಟ್‌ನಲ್ಲಿ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಿ ನ್ಯಾಯಯುತವಾಗಿ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ರಾಮ್‌ಪುರಹಾಟ್‌ ಘಟನೆ ದುರದೃಷ್ಟಕರ. ಈಗಾಗಲೇ ಒಸಿ, ಡಿಪಿಒ ರನ್ನು ವಜಾ ಮಾಡಿದ್ದೇನೆ. ನಾಳೆ ರಾಮ್‌ಪುರಹಾಟ್‌ಗೆ ಹೋಗುತ್ತೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

- Advertisement -

ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯ ರಾಮ್‌ಪುರಹಾಟ್‌ ನಲ್ಲಿ ಮಂಗಳವಾರ ನಸುಕಿನ ಜಾವ ಮನೆಗಳಿಗೆ ಬೆಂಕಿಹತ್ತಿಸಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರನ್ನು ಕ್ರೂರವಾಗಿ ಹತ್ಯೆಗೈಯ್ಯಲಾಗಿದೆ.



Join Whatsapp