ತುರುವೇಕೆರೆ: ನಾನು ಸಿಎಂ ಆಗೋದು ಮುಖ್ಯ ಅಲ್ಲ, ಮುಂಬರುವ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ತುರುವೇಕೆರೆಯಲ್ಲಿ ನಡೆದ ಭಾರತ ಐಕ್ಯತಾ ಯಾತ್ರೆ ಪೂರ್ವ ಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿ ಅವರು, ಕಾಂಗ್ರೆಸ್ ನ ಮುಖ್ಯಮಂತ್ರಿಗಳು ಇರಬೇಕು. ರಾಜ್ಯದ ಜನತೆಯ ಕಣ್ಣೀರು ಒರೆಸಬೇಕು ಅಷ್ಟೆಎಂದು ಹೇಳಿದರು.
ಪಕ್ಷಕ್ಕೆ ಯಾರೂ ಮುಖ್ಯವಲ್ಲ. ಪಕ್ಷ ಇದ್ದರೆ ಎಲ್ಲರೂ ಇದ್ದಂತೆ. ಮೊದಲು ಪಕ್ಷ ಸಂಘಟನೆ ಮಾಡಬೇಕು. ಆ ನಂತರ ಅಧಿಕಾರ ಎಂಬುದು ತಾನಾಗಿಯೇ ನಮ್ಮ ಬಳಿ ಬರುತ್ತದೆ ಎಂದು ತಿಳಿಸಿದರು.