ರಿಯಾದ್: ಈ ವರ್ಷದ ರಂಝಾನ್ ನಲ್ಲಿ ಮಕ್ಕಾದ ಮಸ್ಜಿದುಲ್ ಹರಾಮ್ ಮತ್ತು ಮದೀನಾದ ಮಸ್ಜಿದುನ್ನಬವಿಯಲ್ಲಿ ಇಅ್‌ತಿಕಾಫ್‌ಗೆ ಅನುಮತಿ ನೀಡಲಾಗುವುದು ಎಂದು ಸೌದಿ ಸರ್ಕಾರ ಪ್ರಕಟನೆಯಲ್ಲಿ ತಿಳಿಸಿದೆ.
ವಿಶೇಷ ನಿಯಮಗಳನುಸಾರ ರಂಝಾನಿನ ಕೊನೆಯ ಹತ್ತು ದಿನಗಳಲ್ಲಿ ಇಅ್‌ತಿಕಾಫ್ ಕುಳಿತುಕೊಳ್ಳುವುದಕ್ಕೆ ಎರಡು ಹರಮ್‌ಗಳಲ್ಲಿ ಅವಕಾಶವನ್ನು ಒದಗಿಸಲಾಗಿದ್ದು, ಇದಕ್ಕಾಗಿ ಹರಮ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಅನುಮತಿ ಪಡೆದುಕೊಳ್ಳಬೇಕಾಗಿದೆ.
ಹರಮ್‌ಗಳಿಗೆ ಪ್ರವೇಶಿಸಲು ಇಮ್ಯೂನ್ ಸ್ಟೇಟಸ್ ಕಡ್ಡಾಯವಾಗಿದ್ದು, ಮಸೀದಿಯಲ್ಲಿ ಸುರಕ್ಷಿತ ಅಂತರವನ್ನು ಪಾಲಿಸಬೇಕು ಎಂದು ಮೂಲಗಳು ತಿಳಿಸಿವೆ. ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿ ಇಅ್‌ತಿಕಾಫ್‌ಗೆ ಅನುಮತಿ ದೊರೆತಿದೆ.