ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಸರ್ಕಾರ ರಚಿಸುವುದು ಅತ್ಯಂತ ಕಷ್ಟವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ಭಾಷಣಗಳು ಇತ್ತೀಚಿನ ದಿನಗಳಲ್ಲಿ ಸವಕಲಾಗಿವೆ ಎಂದ ಅವರು, ಮೋದಿ ಭಾಷಣದಲ್ಲಿ ಮೊದಲಿದ್ದ ಗತ್ತು, ಗಮ್ಮತ್ತು, ಅಭಿಮಾನ ಕಾಣೆಯಾಗಿದೆ. ಅವರು ತೆಲಂಗಾಣದಲ್ಲಿ ಮಾತನಾಡುತ್ತಿದ್ದಾಗ ಇದನ್ನು ನಾನು ಗಮನಿಸಿರುವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಚುನಾವಣೆಯ ಮೂರು ಹಂತಗಳ ಮತದಾನ ಮುಗಿದ ಮೇಲೆ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದು ಕಷ್ಟ ಎಂಬುದನ್ನು ನಾನು ಹೇಳಬಲ್ಲೆ ಎಂದು ಹೇಳಿದ್ದಾರೆ.