ಮುಸ್ಲಿಮರಿಗೆ ಮೀಸಲಾತಿ ಒದಗಿಸಿದ್ದು ದೇವೇಗೌಡರಲ್ಲ, ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಅಫ್ಸರ್ ಕೊಡ್ಲಿಪೇಟೆ

Prasthutha|

ಬೆಂಗಳೂರು: ಮುಸ್ಲಿಮರಿಗೆ 2B ಮೀಸಲಾತಿ ಒದಗಿಸಿದ್ದು ದೇವೇಗೌಡರಲ್ಲ, ಕುಮಾರಸ್ವಾಮಿಯವರೇ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಕೇಂದ್ರ ಸಚಿವ ಹೆಚ್‌ಡಿಕೆಗೆ SDPI ಮುಖಂಡ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

- Advertisement -

ಮನುವಾದಿಗಳಿಗೆ ಶರಣಾಗಿ ಕೋಮುವಾದವನ್ನು ಅವಾಹಿಸಿಕೊಂಡಿರುವ ಕುಮಾರಸ್ವಾಮಿಯವರು ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ಮತ್ತದೇ ಹಳಸಲು ಸುಳ್ಳನ್ನು ಮತ್ತೆ ಹೇಳಿದ್ದಾರೆ. ಮುಸ್ಲಿಮರಿಗೆ 2B ಮೀಸಲಾತಿ ಒದಗಿಸಿದ್ದು ಹೆಚ್‌ಡಿ ದೇವೇಗೌಡರವರು ಎಂಬ ಹಸಿ ಸುಳ್ಳನ್ನು ಕುಮಾರಸ್ವಾಮಿ ಯಾವುದೇ ನಾಚಿಕೆ, ಹಿಂಜರಿಕೆ ಇಲ್ಲದೆ ಪದೇ ಪದೇ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಮುಸ್ಲಿಮರಿಗೆ 2B ಮೀಸಲಾತಿ ಜಾರಿ ಮಾಡಿದ್ದು ವೀರಪ್ಪ_ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದಾಗ. 1994ರಲ್ಲಿ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿಯವರ ಸಮಿತಿಯ ಶಿಫಾರಸ್ಸಿನ ಮೇಲೆ ಅಂದಿನ ಸರ್ಕಾರ ಅದನ್ನು ಜಾರಿ ಮಾಡಿತ್ತು. ಈಗಲಾದರೂ ಕುಮಾರಸ್ವಾಮಿಯವರು ಈ ವಿಚಾರದಲ್ಲಿ ರಾಜ್ಯದ ಜನತೆಗೆ ಸುಳ್ಳು ಹೇಳುವುದನ್ನು ನಿಲ್ಲಿಸಿದರೆ ಒಳಿತು ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

ಸುಳ್ಳು ಹೇಳುವುದನ್ನೇ ಬದುಕಾಗಿಸಿಕೊಂಡಿರುವ ಕುಮಾರ ಸ್ವಾಮಿಯವರೇ ದುರಹಂಕಾರ ಬೇಡ. 2024ರದ್ದೇ ನಿಮ್ಮ ಕೊನೆಯ ಚುನಾವಣೆ ಅಲ್ಲ. ನೀವು ಮತ್ತೆ ಮುಸ್ಲಿಮರ ಕಾಲಿಗೆ ಬೀಳಲೇಬೇಕು ನೆನಪಿರಲಿ. ನಿಮ್ಮ ಸೊಕ್ಕಿನ ಮಾತುಗಳಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಫ್ಸರ್ ಮಾಜಿ ಸಿಎಂನ್ನು ಎಚ್ಚರಿಸಿದ್ದಾರೆ.

- Advertisement -

ಕುಮಾರಸ್ವಾಮಿಯವರೇ, ಕೋಮುವಾದಿಗಳ ಮಡಿಲಲ್ಲಿ ಕುಳಿತು ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಚಟವನ್ನು ಇದೇ ರೀತಿ ಮುಂದುವರಿಸಿದರೆ ಈಗ ಇರುವ ಕನಿಷ್ಠ 19 ಶಾಸಕರ ಸಂಖ್ಯೆಯೂ ಕುಸಿದು ಒಂದು, ಎರಡಕ್ಕೆ ಈ ರಾಜ್ಯದ ಜನ ಇಳಿಸುತ್ತಾರೆ. ತಮ್ಮ ಮಗ ಸೋತಿರುವುದು ತಮ್ಮ ಸಮರ್ಥತೆಯಿಂದ. ಅದನ್ನು ಅರಿಯುವ ಧೈರ್ಯ ಮತ್ತು ಸೌಜನ್ಯ ಎರಡನ್ನೂ ಮರೆತಿದ್ದೀರಿ. ಅಥವಾ ಮರೆತಂತೆ ನಟಿಸುತ್ತಿದ್ದೀರಿ ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ

Join Whatsapp