ದಮ್ಮಾಮ್: ದಮ್ಮಾಮ್ ನಲ್ಲಿ ಮೃತಪಟ್ಟ ಹಿಂದೂ ಸಹೋದರನ ಮೃತದೇಹವನ್ನು ಊರಿಗೆ ಕಳುಹಿಸಲು ನೆರವಾಗುವ ಮೂಲಕ ಕೆಸಿಎಫ್ ತಂಡ ಮಾನವೀಯತೆ ಮೆರೆದಿದೆ.
ಸೌದಿ ಅರೇಬಿಯಾದ ದಮ್ಮಾಮ್ ಮಂಗಳೂರು ನಂತೂರು ನಿವಾಸಿ ಸತೀಶ ಮುಕುಂದ (60) ಎಂಬುವವರು ದಮ್ಮಾಮ್ ಅಲ್ ಕುಸ್ಸಿ ಎಂಬ ಕಂಪೆನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸುಮಾರು ಮೂರು ತಿಂಗಳ ಹಿಂದೆ ದಿಢೀರಣೆ ಕಾಣಿಸಿಕೊಂಡ ರೋಗ ಉಲ್ಬಣಗೊಂಡು ಕಿಂಗ್ ಫಹದ್ ಆಸ್ಪತ್ರೆಯಲ್ಲಿ ICUನಲ್ಲಿ ದಾಖಲಾಗಿದ್ದರು. ಕೆಲವು ದಿನಗಳ ಹಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಆಸ್ಪತ್ರೆಗೆ ದಾಖಲಾದಾಗಿನಿಂದ ಹಿಡಿದು ಮಾನವೀಯ ನೆಲೆಯಲ್ಲಿ ಕೆ.ಸಿ.ಎಫ್ ದಮ್ಮಾಮ್ ಸಾಂತ್ವನ ತಂಡ ನಿರಂತರ ಸಂಪರ್ಕದಲ್ಲಿದ್ದು ಅವರನ್ನು ದಿನನಿತ್ಯ ಬೇಟಿ ನೀಡಿ ಆಹಾರದ ವ್ಯವಸ್ಥೆ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಪೂರೈಸುತ್ತ ಬಂದಿದೆ.
ಮೃತ ದೇಹವನ್ನು ಊರಿಗೆ ಕಳುಹಿಸಲು ಕೆ.ಸಿ.ಎಫ್ ಸಾಂತ್ವನ ತಂಡ ಸೌದಿಯ ಭಾರತೀಯ ರಾಯಭಾರಿ ಕಚೇರಿ ಹಾಗು ಸೌದಿ ಸರಕಾರದ ಕಚೇರಿಗಳನ್ನು ನಿರಂತರ ಸಂಪರ್ಕಿಸಿ ಫೆಬ್ರವರಿ 10 2022 ರಂದು ಊರಿಗೆ ಮೃತದೇಹ ಕಳಿಸಿ ಕೊಡುವಲ್ಲಿ ಯಶಸ್ವಿಯಾಗಿದೆ.
ಮಂಗಳೂರು ವಿಮಾನ ನಿಲ್ದಾನದಿಂದ ಆಂಬುಲನ್ಸ್ ಮುಖಾಂತರ ಅವರ ಮನೆಗೆ ಮತ್ತು ಸ್ಮಶಾನಕ್ಕೆ ಕೊಂಡೊಯ್ಯಲು ಕೆ,ಸಿ.ಎಫ್ –ಎಸ್ ಎಸ್ ಎಫ್ ನ ಆಂಬುಲೆನ್ಸ್ ತಲಪಿಸುವ ವ್ಯವಸ್ಥೆ ಮಾಡಿದೆ.
ಈ ಒಂದು ಉತ್ತಮ ಕಾರ್ಯಾಚರಣೆಯಲ್ಲಿ ನೇತೃತ್ವ ವಹಿಸಿದ ಕೆ.ಸಿ.ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಡಿ.ಪಿ ಯೂಸುಫ್ ಸಖಾಫಿ ಬೈತಾರ್ , ದಮ್ಮಾಮ್ ಸಾಂತ್ವನ ಝೋನ್ ವಿಭಾಗದ ನಾಯಕಾದ ಬಾಷಾ ಗಂಗಾವಳಿ, ಹಾಗೂ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಮಾಡಿ ಸಹಕರಿಸಿದ ದಮ್ಮಾಮ್ ಝೋನ್ ನಾಯಕರಾದ ತಮೀಮ್ ಕೂಳೂರು ಹಾಗೂ ನಾರ್ತ್ ಸೆಕ್ಟರ್ ಕಾರ್ಯದರ್ಶಿ ಹನೀಫ್ ಮೂಡಬಿದ್ರೆ ,ಕೆ.ಸಿ.ಎಫ್ ದಮ್ಮಾಮ್ ಝೋನ್ ಸದಸ್ಯರು , ಇಬ್ಬು ಬಜ್ಪೆ, ಹಾಗೂ ಇತರ ಸಂಘ ಸಂಸ್ಥೆ ನಾಯಕರಿಗೆ ಕೆಸಿಎಫ್ ರಾಷ್ಟ್ರೀಯ ಸಮಿತಿ ಆಭಿನಂದನೆ ಸಲ್ಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.