ಮಂಗಳೂರು | ಯೆನೆಪೋಯ, ಎಜೆ ಆಸ್ಪತ್ರೆ ಮಾಲೀಕರ ಮನೆಗಳ ಮೇಲೆ ಐಟಿ ದಾಳಿ

Prasthutha|

ಮಂಗಳೂರಿನ ವಿವಿಧ ಉದ್ಯಮಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶೋಧ ನಡೆಸಿದೆ.

- Advertisement -

ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಾದ ಎ‌ ಜೆ ಆಸ್ಪತ್ರೆ, ಯೆನೆಪೋಯ ಆಸ್ಪತ್ರೆ ಮಾಲೀಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂದೂರ್ ವೆಲ್ ನಲ್ಲಿರುವ ಉದ್ಯಮಿ ಎ‌.ಜೆ. ಶೆಟ್ಟಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು  ಪರಿಶೀಲನೆ ಮಾಡುತ್ತಿದ್ದಾರೆ.

- Advertisement -

ಮಂಗಳೂರು ಮತ್ತು ದೇರಳಕಟ್ಟೆಯಲ್ಲಿರುವ ಯೆನೆಪೋಯ ಆಸ್ಪತ್ರೆಗಳು ಹಾಗೂ ಅದರ ಮಾಲೀಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.



Join Whatsapp