ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ: ಸರ್ಕಾರ ಸ್ವಲ್ಪ ಮಟ್ಟಿಗೆ ಶೇಕ್ ಆಗಿರೋದು ನಿಜ ಎಂದ ಪರಮೇಶ್ವರ್‌

Prasthutha|

- Advertisement -

ಬೆಂಗಳೂರು: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದಕ್ಕೆ ಸರ್ಕಾರ ಸ್ವಲ್ಪ ಮಟ್ಟಿಗೆ ಶೇಕ್ ಆಗಿರೋದು ನಿಜ , ಆದರೆ ಇದನ್ನು ನಾವು ಸರಿಪಡಿಸಿಕೊಂಡು ಆಡಳಿತ ಮುಂದುವರಿಸ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸ್ವಲ್ಪ ಮಟ್ಟಿಗೆ ಶೇಕ್ ಆಗಿರೋದು ಹೌದು, ಇಲ್ಲ ಅಂತ ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ. ಆದರೆ ಇದನ್ನೆಲ್ಲ ನಾವು ಸರಿಪಡಿಸಿಕೊಂಡು ಆಡಳಿತ ಮುಂದುವರಿಸುತ್ತೇವೆ. ಸಂಪುಟ ಸಭೆಯಲ್ಲೂ ನಾವ್ಯಾರೂ ಬಿಜೆಪಿ ಹುನ್ನಾರಕ್ಕೆ ಬಲಿಯಾಗೋದು ಬೇಡ, ಕಾನೂನು ಸಮರ ಮುಂದುವರಿಸಿಕೊಂಡು ಆಡಳಿತ ನಡೆಸುವ ತಿರ್ಮಾನ ಮಾಡಿದ್ದೇವೆ. ಆದರೆ ಬಿಜೆಪಿ ಹೇಗಾದರೂ ಮಾಡಿ ಈ ಸರ್ಕಾರ ಬೀಳಿಸುವ ಸ್ಕೀಂ ಹಾಕಿಕೊಂಡಿದೆ. ಸಿದ್ದರಾಮಯ್ಯ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ.

- Advertisement -

ಬಿಜೆಪಿಯವರೂ ಹೋರಾಟ ಮಾಡಲಿ, ಅದು ಅವರ ಹಕ್ಕು ಹಾಗೆಯೇ ನಾವೂ ಹೋರಾಟ ಮಾಡ್ತೀವಿ, ಇದು ನಮ್ಮ ಹಕ್ಕು. ಜಿಲ್ಲೆ, ತಾಲ್ಲೂಕುಗಳಲ್ಲಿ ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಬಂದಿದೆ. ಅವರಿಗೆ ರಾಜಕೀಯ ಉತ್ತರ ಕೊಡಲು ರಾಜಕೀಯ ಹೋರಾಟವೇ ಮಾಡಬೇಕು. ನಾಳೆ (ಆ.19) ರಾಜ್ಯಾದ್ಯಂತ ಪಕ್ಷದಿಂದ ಶಾಂತಿಯುತ ಪ್ರತಿಭಟನೆಗೆ ಅಧ್ಯಕ್ಷರು ಕರೆ ಕೊಟ್ಟಿದ್ದಾರೆ.

ರಾಜ್ಯಪಾಲರ ತೀರ್ಮಾನವೂ ರಾಜಕೀಯದ್ದು, ಸಚಿವ ಸಂಪುಟ ತೀರ್ಮಾನವನ್ನೇ ಅವರು ತಿರಸ್ಕರಿಸಿದ್ದಾರೆ. ಉದ್ದೇಶಪೂರ್ವಕವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ.



Join Whatsapp