ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡುವುದು ಸರಕಾರದ ಹೊಣೆ: ಬೊಮ್ಮಾಯಿಗೆ ಬಿಕೆ ಹರಿಪ್ರಸಾದ್ ಕ್ಲಾಸ್

Prasthutha|

ಬೆಂಗಳೂರು: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ, ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಕೇಳಿದ ಕನ್ನಡಿಗ ಕ್ರೀಡಾಪಟು ಗುರುರಾಜ್ ಪೂಜಾರಿಯವರನ್ನು ವೇದಿಕೆಯಲ್ಲೇ ಅವಮಾನಿಸಿದ ಮುಖ್ಯಮಂತ್ರಿ ಬೊಮ್ಮಾಯಿಗೆ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಕ್ಲಾಸ್ ತೆಗೆದುಕೊಂಡಿದ್ದಾರೆ.

- Advertisement -

ಕರ್ನಾಟಕದ ಕ್ರೀಡಾಪಟುಗಳಿಗೆ ಮತ್ತಷ್ಟು ಬೆಂಬಲ ಸಿಕ್ಕರೆ ಇನ್ನೂ ಹೆಚ್ಚು ಪದಕ ಗೆಲ್ಲಲು ನೆರವಾಗುತ್ತದೆ ಎಂದು ಹೇಳಿದ ಗುರುರಾಜ್ ಅವರಿಗೆ ಸಿಎಂ ಬೊಮ್ಮಾಯಿ ನೌಕರಿಗಾಗಿ ಕ್ರೀಡೆಯನ್ನು ಆಡುವುದಲ್ಲ. ದೇಶಕ್ಕಾಗಿ ಆಡಿ, ಪದಕವನ್ನು ಗೆಲ್ಲಬೇಕು. ಮೊದಲು ಆಟವಾಡುವುದನ್ನು ಕಲಿಯಿರಿ ಎಂದು ಅವಮಾನಕರ ರೀತಿಯಲ್ಲಿ ಮಾತನಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಕೆ ಹರಿಪ್ರಸಾದ್ ಯುವಜನರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಿ ಉತ್ತೇಜನ ನೀಡುವುದು ಸರ್ಕಾರದ ಹೊಣೆಗಾರಿಕೆ ಹೊರತು,ಅಧಿಕಾರದ ನಶೆಯಲ್ಲಿ ಅವಮಾನ ಮಾಡುವುದಲ್ಲ. ಅಮಾಯಕ ಯುವಕರ ಕೊಲೆಯಲ್ಲಿ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುವ ಹೊಣೆಗೇಡಿ ಸರ್ಕಾರಕ್ಕೆ, ಕಾಮನ್ ವೆಲ್ತ್ ನಲ್ಲಿ ಪದಕ ತಂದು ನಾಡಿಗೆ,ದೇಶಕ್ಕೆ ಹೆಮ್ಮೆ ತರುವ ಕ್ರೀಡಾಪಟುಗಳ ಶ್ರಮ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಸಿಎಂ ಹೇಳಿಕೆ ವಿಚಾರವಾಗಿ ಸಾಮಾಜಿಕ ವಲಯಗಳಲ್ಲೂ ತುಂಬಾ ಆಕ್ರೋಶ ವ್ಯಕ್ತವಾಗುತ್ತಿದೆ.



Join Whatsapp