ಪಣಜಿ: ಬಾರ್ ನಲ್ಲಿ ಕುಡಿದವರನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸುವುದು ಸಂಬಂಧಪಟ್ಟ ಮದ್ಯದ ಅಂಗಡಿಯ ಮಾಲೀಕರ ಜವಾಬ್ದಾರಿಯೆಂದು ಗೋವಾ ಸಚಿವ ಮೌವಿನ್ ಗೋಡಿನ್ಹೊ ಹೇಳಿದ್ದಾರೆ.
ಗೋವಾದಲ್ಲಿ ಮದ್ಯದ ದರ ಅಗ್ಗವಾಗಿದೆ ಎಂಬ ಕಾರಣಕ್ಕೆ ಹೆಚ್ಚಿನ ಪ್ರವಾಸಿಗರು ಹಾಗೂ ಹೆಚ್ಚಿನ ಜನರು ಬೇಕಾಬಿಟ್ಟಿಯಾಗಿ ಕುಡಿದು ವಾಹನ ಚಲಾಯಿಸುತ್ತಾರೆ ಮತ್ತು ಅನುಚಿತವಾಗಿ ವರ್ತಿಸುತ್ತಾರೆ. ಈ ಕಾರಣದಿಂದ ಅಪಘಾತದ ಪ್ರಕರಣವೂ ಹೆಚ್ವಾಗಿದೆ. ದೊಂಬಿ ,ಕಲಹಗಳೂ ಹೆಚ್ಚಾಗಿದೆ’ ಎಂದು ಅವರು ಹೇಳಿದ್ದಾರೆ.
ಕುಡಿದವರನ್ನು ಸಮರ್ಪಕವಾಗಿ ಅವರ ಮನೆಗೆ, ಏನೂ ಆಘಾತ ಸಂಭವಿಸದ ರೂಪದಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಿಸುವಲ್ಲಿ ಬಾರ್ ಮಾಲೀಕರು ಪಾತ್ರ ವಹಿಸಬೇಕು. ಇದು ಅವರ ನೇರ ಜವಾಬ್ದಾರಿ. ಈ ಕುರಿತು ಮುಖ್ಯಮಂತ್ರಿ ಬಳಿ ಚರ್ಚಿಸಲಾಗುವುದು ಎಂದಿದ್ದಾರೆ.
ಈ ನಿಲುವು ಗೋವಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.