ಕೋಮುವಾದಿ ಶಕ್ತಿಗಳು ಭಗತ್ ಸಿಂಗ್ ರನ್ನು ತಮ್ಮ ನಾಯಕನೆಂದು ಬಿಂಬಿಸುತ್ತಿರುವುದು ಹಾಸ್ಯಾಸ್ಪದ: ಪಿಣರಾಯಿ ವಿಜಯನ್

Prasthutha|

ತಿರುವನಂತಪುರಂ: ರಾಷ್ಟ್ರೀಯ ಆಂದೋಲನಕ್ಕೆ ದ್ರೋಹ ಬಗೆದ ಕೋಮುವಾದಿ ಶಕ್ತಿಗಳು ಭಗತ್ ಸಿಂಗ್ ಅವರನ್ನು ತಮ್ಮ ಐತಿಹಾಸಿಕ ನಾಯಕನನ್ನಾಗಿ ಮಾಡಲು ಮುಂದಾಗುತ್ತಿರುವುದು ಹಾಸ್ಯಾಸ್ಪದ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

- Advertisement -


ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ ಗುರು ಅವರ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ಪಿಣರಾಯಿ ಸಾಮಾಜಿಕ ಮಾಧ್ಯಮದಲ್ಲಿ ಈ ಹೀಳಿಕೆ ನೀಡಿದ್ದಾರೆ.


ಭಾರತದ ಮೇಲೆ ಬ್ರಿಟಿಷ್ ವಸಾಹತುಶಾಹಿ ಪ್ರಾಬಲ್ಯವನ್ನು ವಿಶ್ವ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಭಾಗವೆಂದು ಪರಿಗಣಿಸಿದ ಭಗತ್ ಸಿಂಗ್, ರಾಷ್ಟ್ರೀಯ ಚಳುವಳಿಯಲ್ಲಿ ಕ್ರಾಂತಿಕಾರಿ ಹರಿವಿನ ಪ್ರವರ್ತಕರಾಗಿದ್ದರು. ಈ ಕ್ರಾಂತಿಕಾರಿಗಳ ಉಜ್ವಲ ನೆನಪುಗಳು ಸ್ವಾತಂತ್ರ್ಯವೆಂದರೆ ಅಸಮಾನತೆ ಮತ್ತು ಬಂಡವಾಳಶಾಹಿ ಶೋಷಣೆಯಿಂದ ಸ್ವಾತಂತ್ರ್ಯ ಎಂದು ತಿಳಿದಿರುವ ಎಲ್ಲರಿಗೂ ದೊಡ್ಡ ಸ್ಫೂರ್ತಿಯಾಗಿದೆ. ಭಾರತದ ಕಮ್ಯುನಿಸ್ಟ್ ಚಳುವಳಿಯು ಈ ವಿಮೋಚನಾ ಕ್ರಾಂತಿಕಾರಿ ಪ್ರವಾಹಕ್ಕೆ ಬಹಳಷ್ಟು ಋಣಿಯಾಗಿದೆ. ಬಲಪಂಥೀಯ ಪಕ್ಷಗಳು ಈ ಸಂಪ್ರದಾಯವನ್ನು ತಿರುಚುತ್ತಿವೆ ಎಂದು ಹೇಳಿದರು.

- Advertisement -


ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳು ಜನರ ಜೀವನವನ್ನು ಹೆಚ್ಚು ಶೋಚನೀಯಗೊಳಿಸುತ್ತಿವೆ. ಇದರ ವಿರುದ್ಧ ಹೊರಹೊಮ್ಮುತ್ತಿರುವ ಜನಾಂದೋಲನಗಳನ್ನು ವಿಭಜಿಸಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಭಾರತದ ಜನರು ಈ ಧ್ರುವೀಕರಣ ಪ್ರಯತ್ನಗಳನ್ನು ವಿರೋಧಿಸುತ್ತಾರೆ. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಪೌರಾಣಿಕ ಇತಿಹಾಸವು ಇದಕ್ಕೆ ಉತ್ತೇಜನ ನೀಡುತ್ತದೆ” ಎಂದು ಪಿಣರಾಯಿ ಹೇಳಿದರು.



Join Whatsapp