ರಾಜ್ಯ ಸರಕಾರದ ಆದೇಶಗಳು ಆಂಗ್ಲ ಭಾಷೆಯಲ್ಲಿ ಬರುತ್ತಿರುವುದು ವಿಷಾದನೀಯ: ಟಿ.ತಿಮ್ಮೇಗೌಡ

Prasthutha|

ಬೆಂಗಳೂರು: ರಾಜ್ಯ ಸರಕಾರ ಕನ್ನಡವನ್ನು ಆಡಳಿತ ಭಾಷೆಯೆಂದು ಘೋಷಣೆ ಮಾಡಿ, ಆದೇಶ ಹೊರಡಿಸಿದೆ. ಆದರೂ ರಾಜ್ಯ ಸರಕಾರದ ಟಿಪ್ಪಣಿ ಮತ್ತು ಆದೇಶಗಳು ಆಂಗ್ಲ ಭಾಷೆಯಲ್ಲಿ ಬರುತ್ತಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -


ಅಖಿಲ ಕರ್ನಾಟಕ ಕುವೆ೦ಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಕನ್ನಡ ನುಡಿ ಸಮ್ಮೇಳನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗಡಿ ಸಂಘರ್ಷಗಳು ನಡೆಯುತ್ತಿದೆ. ಸ್ವಾತಂತ್ರ್ಯ ಬಂದ ನಂತರ ರಾಜ್ಯಗಳ ಮರುವಿಂಗಡನೆಯಾಗಿದ್ದು, ಈ ಗಂಭೀರ ಸಮಯದಲ್ಲಿ ಒಕ್ಕೂಟ ವ್ಯವಸ್ಥೆಯ ಕೇಂದ್ರ ಸರಕಾರ ಈ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಮನಸ್ಸು ಮಾಡಬೇಕಾಗಿದೆ ಎಂದು ಹೇಳಿದರು.


ರಾಜ್ಯ ಮಟ್ಟದಿ೦ದ ಕೆಳಹಂತದವರೆಗೂ ಇರುವ ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡತಗಳು, ಟಿಪ್ಪಣಿ ಹಾಗೂ ಆದೇಶಗಳು ಕನ್ನಡದಲ್ಲಿರಬೇಕು. ಅಲ್ಲದೆ, ಎಲ್ಲ ಪತ್ರ ವ್ಯವಹಾರಗಳು ಕನ್ನಡದಲ್ಲೇ ಆಗಬೇಕು. ಎಲ್ಲ ನ್ಯಾಯಾಲಯಗಳ ನಡಾವಳಿ, ಮತ್ತು ಆದೇಶಗಳು ಕನ್ನಡದಲ್ಲಿರಬೇಕು ಎಂದು ಹೇಳಿದರು.

Join Whatsapp