ಸಿ.ಟಿ. ರವಿಯನ್ನು ಚಡ್ಡಿ ರವಿ ಎಂದು ಕರೆದರೂ ತಪ್ಪಾಗಲ್ಲ: ರಮೇಶ್ ಬಾಬು

Prasthutha|

ಬೆಂಗಳೂರು: ಮರಿ ಖರ್ಗೆ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿದ ಸಿ.ಟಿ. ರವಿ ಅವರನ್ನು ಚಡ್ಡಿ ರವಿ ಎಂದು ಕರೆದರೂ ತಪ್ಪಾಗಲ್ಲ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.

- Advertisement -


ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ನಾವು ಮೊದಲಿನಿಂದಲೂ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದು ಹೇಳುತ್ತಿದ್ದೆವು. ಈಗಾ ಬಿಜೆಪಿ ಬಿ ಟೀಂ ಎಂದು ತೊರಿಸಿಕೊಟ್ಟಿದ್ದಾರೆ ಎಂದರು.


ಬಿಎಸ್ ಯಡಿಯೂರಪ್ಪ, ನಳೀನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ ಅವರಿಗೆ ವಿಶ್ರಾಂತಿ ಕೊಡಲು ಕುಮಾರಸ್ವಾಮಿ ಅವರಿಗೆ ರೆಡ್ ಕಾರ್ಪೆಟ್ ಹಾಕಲಾಗಿದೆ. ಸಿಪಿ ಯೊಗೇಶ್ವರ್, ಕುಮಾರಸ್ವಾಮಿ ಅವರು ಒಳ್ಳೆ ಜೋಡಿಗಳಾಗಿ ಹೊರ ಹೊಮ್ಮಿದ್ದಾರೆ. ಒಂದಾಗಿ ಸೈದ್ದಾಂತಿಕವಾಗಿ ಪಕ್ಷಕಟ್ಟಿದ್ದಾರೆ ರಾಜಕಾರಣ ಮಾಡಿದರೆ ನಾವು ಬೇಡ ಅನ್ನುವುದಿಲ್ಲ. ಆದರೆ ಪದೇ ಪದೆ ಡಿಕೆಶಿವಕುಮಾರ್, ಡಿಕೆ ಸುರೇಶ್ ವಿಚಾರ ಮಾತಾನಾಡುವುದು ಸರಿ ಅಲ್ಲ ಎಂದರು.

Join Whatsapp