ಚೀನಾಕ್ಕೆ ನಿಷ್ಠರಾಗಿರುವವರು ಪದ್ಮ ಪ್ರಶಸ್ತಿಯನ್ನು ಬಹಿಷ್ಕರಿಸಿದರೂ ಆಶ್ಚರ್ಯವಿಲ್ಲ: ಕೆ. ಸುರೇಂದ್ರನ್

Prasthutha|

ಕಲ್ಲೀಕೋಟೆ: ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನಿರಾಕರಿಸಿದ ಸಿಪಿಐ(ಎಂ) ನಾಯಕ ಬುದ್ಧದೇವ್ ಭಟ್ಟಾಚಾರ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಟೀಕಿಸಿದ್ದಾರೆ.

- Advertisement -

ನಾಡಿಗಿಂತ ಚೀನಾಕ್ಕೆ ನಿಷ್ಠರಾಗಿರುವವರು ಪದ್ಮ ಪ್ರಶಸ್ತಿಗಳನ್ನು ಬಹಿಷ್ಕರಿಸಿದರೂ ಆಶ್ಚರ್ಯವಿಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ.

“ನಮ್ಮ ನಾಡಿಗಿಂತ ಚೀನಾಕ್ಕೆ ನಿಷ್ಠರಾಗಿರುವವರು ಪದ್ಮ ಪ್ರಶಸ್ತಿಯನ್ನು ಬಹಿಷ್ಕರಿಸಿದರೂ ಆಶ್ಚರ್ಯವೇನಿಲ್ಲ. ಭಟ್ಟಾಚಾರ್ಯರು ಪದ್ಮಭೂಷಣ ಪ್ರಶಸ್ತಿ ನಿರಾಕರಿಸಲು ಕಾರಣ ಪಕ್ಷದ ನಿರ್ಧಾರವಾಗಿರಬಹುದು. ಹೇಗಿದ್ದರೂ ಕೇರಳ ಭೂಷಣ್ ಮತ್ತು ಕೇರಳ ಶ್ರೀ ಪ್ರಶಸ್ತಿ ಪ್ರಕಟವಾದರೆ ಮೊದಲು ಅವರಿಗೇ ಆಗಲಿ” ಎಂದು ಕೆ.ಸುರೇಂದ್ರನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

- Advertisement -

ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.
ಈ ಬಾರಿ 128 ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೇಶದ ಎರಡನೇ ಅತಿದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ನಾಲ್ಕು ಜನರು ಆಯ್ಕೆಯಾಗಿದ್ದಾರೆ. 17 ಮಂದಿ ಪದ್ಮಭೂಷಣ ಹಾಗೂ 107 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

Join Whatsapp