ಪ್ರತಿ ಮದುವೆಯನ್ನು ಹಿಂಸಾತ್ಮಕ ಮತ್ತು ಪ್ರತಿ ಪುರುಷನನ್ನು ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ: ಸ್ಮೃತಿ ಇರಾನಿ

Prasthutha|

ಹೊಸದಿಲ್ಲಿ: ಪ್ರತಿ ಮದುವೆಯನ್ನು ಹಿಂಸಾತ್ಮಕ ಮತ್ತು ಪ್ರತಿ ಪುರುಷನನ್ನು ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಹೇಳಿದ್ದಾರೆ.

- Advertisement -

ಕೌಟುಂಬಿಕ ಹಿಂಸಾಚಾರ , ಐಪಿಸಿ ಸೆಕ್ಷನ್ 375 ಮತ್ತು ಅತ್ಯಾಚಾರದ ಕುರಿತು ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಸೆಕ್ಷನ್ 3 ಅನ್ನು ಕೇಂದ್ರವು ಗಮನಿಸಿದೆಯೇ ಎಂಬುದರ ಕುರಿತು ಸಿಪಿಐ ಬಿನೋಯ್ ವಿಶ್ವಮ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು,“ಈ ದೇಶದ ಪ್ರತಿಯೊಂದು ವಿವಾಹವನ್ನು ಹಿಂಸಾತ್ಮಕ ವಿವಾಹವೆಂದು ಖಂಡಿಸುವುದು ಮತ್ತು ಈ ದೇಶದ ಪ್ರತಿಯೊಬ್ಬ ಪುರುಷನನ್ನು ಅತ್ಯಾಚಾರಿ ಎಂದು ಖಂಡಿಸುವುದು ಈ ಸದನದಲ್ಲಿ ಸೂಕ್ತವಲ್ಲ .ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಎಲ್ಲರಿಗೂ ಆದ್ಯತೆಯಾಗಿದೆ. ಈ ದೇಶದ ಪ್ರತಿಯೊಂದು ಮದುವೆಯನ್ನು ಹಿಂಸಾತ್ಮಕವೆನ್ನುವುದು  ಸೂಕ್ತವಲ್ಲ ಎಂದು ತಿಳಿಸಿದರು.

Join Whatsapp