ಮಂಗಳೂರು: ಪುನೀತ್ ಕೆರೆಹಳ್ಳಿಗು ಮಾಂಸ ದಂಧೆಗೂ ಎಲ್ಲಿಲ್ಲದ ಸಂಬಂಧ. ಈ ಹಿಂದೆ ಮಾಂಸ ದಂಧೆ ಮಾಡುತ್ತಿದ್ದ ಪುನೀತ್ ಕೆರೆಹಳ್ಳಿಗೆ ಇತ್ತೀಚೆಗೆ ಪೌಷ್ಟಿಕ ಮಾಂಸ ಯಾವುದು,ಸಾಮಾನ್ಯ ಮಾಂಸ ಯಾವುದು ಎಂಬ ಬಗ್ಗೆ ಪರಿಜ್ಞಾನ ಇಲ್ಲದಷ್ಟು ಅವರು ವಿಕೃತರಾಗಿದ್ದಾರೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿದಿನ ನಗರಕ್ಕೆ ರವಾನೆ ಆಗುತ್ತಿರುವ ಆಡು,ಕುರಿ,ಪೌಷ್ಟಿಕ ಆಹಾರವು ನಾಯಿ ಮಾಂಸ ಎಂಬಂತೆ ಬೊಬ್ಬೆ ಹಾಕುವ ಇವರಿಗೆ ಶ್ವಾನ ಸ್ಪರ್ಶ ಆಗಿರಬೇಕು.ಆಹಾರ ವಲಯದಲ್ಲಿ ಪ್ರತಿದಿನ ಲಕ್ಷಾಂತರ ಮೊತ್ತದ ವ್ಯವಹಾರವನ್ನು ಕಂಡು ಸಹಿಸದ ಈ ಸಂಘಿ ಮನಸ್ಥಿತಿಯ ಕೆರೆಹಳ್ಳಿಗೆ ತಾನು ಶ್ವಾನ ಸ್ಪರ್ಶಿಸಿದಂತೆ ನಟನೆ ಮಾಡಿದರೆ ಮಾತ್ರ ನಡುಬೀದಿಯಲ್ಲಿ ಆಹಾರ ಪೂರೈಕೆದಾರರ ವಿರುದ್ಧ ತಗಾದೆ ಎಬ್ಬಿಸಿ ಸಮಸ್ಯೆ ಸೃಷ್ಟಿಸಲು ಸಾಧ್ಯ! ಆದುದರಿಂದಲೇ ಕೆರೆಹಳ್ಳಿ ಮೊನ್ನೆ ಶ್ವಾನ ದಂತೆ ವರ್ತಿಸಿದ್ದಾನೆ. ಇಂತಹ ಬೆಳವಣಿಗೆ ನಗರ ಮಿತಿಯಲ್ಲಿ ಬಹಳ ಅಪಾಯಕಾರಿ. ಕೆರೆಹಳ್ಳಿ ಗೆ ಸೂಕ್ತ ಸ್ಥಳ ಮೃಗಾಲಯ. ಆದುದರಿಂದಲೇ ಮೃಗಾಲಯದ ಬೋನುಗಳು ಖಾಲಿ ಇದೆ. ಬೋನುಗಳನ್ನು ಖಾಲಿ ಇಡುವುದು ನಗರ ಆರೋಗ್ಯ ದೃಷ್ಟಿಯಿಂದ ಸರಿಯಲ್ಲ. ಸ್ತ್ರೀ ದಂಧೆ ನಿಸ್ಸೀಮನನ್ನು ಸರಕಾರ ಉತ್ತಮ ರೀತಿಯಲ್ಲಿಯೇ ಉಪಚರಿಸಬೇಕಿದೆ ಎಂದರು.