ಶಾಪಿಂಗ್ ಮಾಲ್‌ನಲ್ಲಿ ಇರುವಷ್ಟೂ ಭದ್ರತೆ ಸಂಸತ್‌ನಲ್ಲಿ ಇಲ್ಲದಿರುವುದು ದುರಂತ: ಕಾಂಗ್ರೆಸ್

Prasthutha|

- Advertisement -

ಬೆಂಗಳೂರು: ಸಂಸತ್ತಿನ ಇತಿಹಾಸದಲ್ಲೇ ಈ ಮಟ್ಟಿನ ಭದ್ರತಾ ಲೋಪವಾಗಿರಲಿಲ್ಲ. ಶಾಪಿಂಗ್ ಮಾಲ್‌ನಲ್ಲಿ ಇರುವಷ್ಟೂ ಭದ್ರತೆ ಸಂಸತ್‌ನಲ್ಲಿ ಇಲ್ಲದಿರುವುದು ದುರಂತ
ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ X ಮಾಡಿದ್ದು, ಡಿಸೆಂಬರ್ 13ರ ಒಳಗೆ ಸಂಸತ್ತನ್ನು ಸ್ಪೋಟಿಸುತ್ತೇವೆ ಎಂದು ಖಲಿಸ್ತಾನಿ ಉಗ್ರರು ಬೆದರಿಕೆ ಹಾಕಿದ ನಂತರವೂ ಸಂಸತ್ತಿನ ಭದ್ರತೆಯನ್ನು ನಿರ್ಲಕ್ಷಿಸಿದ್ದೇಕೆ ಎಂದು ಪ್ರಶ್ನಿಸಿದೆ.

- Advertisement -

ಸತ್ ಭವನದ ಮೇಲಿನ ಆಗಂತುಕರ ಪ್ರವೇಶದ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ಸಂಸತ್ ಭವನವೇ ಸುರಕ್ಷಿತವಿಲ್ಲ, ಇನ್ನು ದೇಶದ ಗಡಿಗಳ ಸ್ಥಿತಿಯೇನು? ಪ್ರಧಾನಿ ಮೋದಿ ಉತ್ತರಿಸಲೇಬೇಕು ಎಂದು ಹೇಳಿದ್ದಾರೆ.

ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರೇ ಪಾಸ್ ನೀಡಿರುವ ವರದಿಗಳು ಬರುತ್ತಿವೆ. ಈ ಸುದ್ದಿ ನಿಜವಾಗಿದ್ದಲ್ಲಿ ಈ ಸಂಸದರನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದಿದ್ದಾರೆ.

ಎರಡು ದಶಕಗಳ ಹಿಂದೆ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಯ ನಂತರ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಎರಡು ದಶಕಗಳ ಹಿಂದೆ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಯ ನಂತರ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Join Whatsapp