ಜನರಲ್ಲಿ ದ್ವೇಷದ ವಿಷ ತುಂಬಿ ಅವರನ್ನು ಪರಸ್ಪರ ಬಡಿದಾಡಿಕೊಳ್ಳುವಂತೆ ಮಾಡುವುದು ಸಂವಿಧಾನದ ಅಣಕ: ಖರ್ಗೆ

Prasthutha|

ನವದೆಹಲಿ: ಜನರಲ್ಲಿ ದ್ವೇಷದ ವಿಷ ತುಂಬಿ ಅವರನ್ನು ಪರಸ್ಪರ ಬಡಿದಾಡಿಕೊಳ್ಳುವಂತೆ ಮಾಡುವುದು ನಮ್ಮ ಸಂವಿಧಾನದ ಅಣಕ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

- Advertisement -


ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ಈ 21ನೇ ಶತಮಾನದ ಭಾರತ ಸಹಿಸುವುದಿಲ್ಲ. ಇಂತಹ ವಿಭಜಕ ಶಕ್ತಿಗಳ ವಿರುದ್ಧ ಜನರು ಒಂದಾಗದಿದ್ದರೆ ನಮ್ಮ ಮುಂದಿನ ಪೀಳಿಗೆಗಳು ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.


‘ಹರಿಯಾಣದ ಕೆಲವೆಡೆ ನಡೆಯುತ್ತಿರುವುದಾಗಲಿ ಅಥವಾ ಆರ್ ಪಿಎಫ್ ಯೋಧ ನಡೆಸಿದ ಕೃತ್ಯವಾಗಲಿ ಭಾರತ ಮಾತೆಯ ಹೃದಯದಲ್ಲಿ ಆಳವಾದ ಗಾಯ ಮಾಡಲಿವೆ’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

- Advertisement -


‘ದ್ವೇಷ ಬಿಡಿ; ಭಾರತ ಒಗ್ಗೂಡಿಸಿ’ ಎಂದು ಮನವಿ ಮಾಡಿರುವ ಅವರು, ‘ಹಿಂಸಾಚಾರದ ಘಟನೆಗಳ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ದುರ್ಬಲ ಕಾನೂನು–ಸುವ್ಯವಸ್ಥೆ ಹಾಗೂ ದುರ್ಬಲ ಸಾಂವಿಧಾನಿಕ ಸಂಸ್ಥೆಗಳ ಕುರಿತು ಹಿಂಸಾಚಾರದ ಘಟನೆಗಳು ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಅಧಿಕಾರ ದಾಹದಿಂದಾಗಿ ದ್ವೇಷ ಹರಡುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿಯೇ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ’ ಎಂದು ಖರ್ಗೆ ಹೇಳಿದ್ದಾರೆ.

Join Whatsapp