ಜ್ಞಾನವಾಪಿ ಮಸೀದಿ ವಿವಾದ: ಮಹಾರಾಷ್ಟ್ರ ನಂದಿ ವಿಗ್ರಹವನ್ನು ವಾರಣಾಸಿಯದ್ದು ಎಂದು ಬಿತ್ತರಿಸುತ್ತಿರುವ ಕನ್ನಡ ಮಾಧ್ಯಮ

Prasthutha|

►ನಂದಿಯ ತಾಳ್ಮೆಗೆ ಕೊನೆಗೂ ಮಣಿದ ಶಿವ ಶೀರ್ಷಿಕೆಯೇ ಸುಳ್ಳು

- Advertisement -

ಮುಂಬೈ : ಜ್ಞಾನವಾಪಿ ಮಸೀದಿ ವಿವಾದದ ನಡುವೆ ಮಸೀದಿಗೆ ಅಭಿಮುಖವಾಗಿ ಕೂತ ನಂದಿಯ ಪ್ರತಿಮೆಯನ್ನು ತೋರಿಸಿ “ನಂದಿಯ ತಾಳ್ಮೆಗೆ ಕೊನೆಗೂ ಮಣಿದ ಶಿವ “ ಎಂಬ ಶೀರ್ಷಿಕೆಯಲ್ಲಿ ಹಲವಾರು ಮಾಧ್ಯಮಗಳು ಚಿತ್ರವೊಂದನ್ನು ಹಂಚುತ್ತಿದ್ದು ಇದು ಸುಳ್ಳು ಮಾಹಿತಿ ಎಂದು ತಿಳಿದು ಬಂದಿದೆ.

ಕನ್ನಡದ ಸುದ್ದಿ ಮಾಧ್ಯಮಗಳು ನಂದಿ ಮತ್ತು ಮಸೀದಿಯ ಕೊಲಾಜ್ ಚಿತ್ರ ಹಂಚಿಕೊಂಡು “ನಂದಿ ಯಾವಾಗಲೂ ಶಿವಲಿಂಗದ ಕಡೆಗೆ ಮುಖ ಮಾಡುತ್ತಾನೆ. ಆದರೆ ಕಾಶಿ ವಿಶ್ವನಾಥನ ನಂದಿಯು ಮೂಲ ವಿಶ್ವನಾಥ ಮಂದಿರವಾದ ಜ್ಞಾನವಾಪಿ ಮಸೀದಿಯತ್ತ ನೊಡುತ್ತಿದ್ದಾನೆ. ಮುಸ್ಲಿಮರು ಮಸೀದಿಯಲ್ಲಿ ನಮಾಜ್ ಮಾಡಿದರೆ, ನಂದಿ ಬಾಗಿಲನ್ನು ದಿಟ್ಟಿಸಿ ನೋಡುತ್ತಾ, ತನ್ನ ಯಜಮಾನನ ಆಗಮನಕ್ಕಾಗಿ ಕಾಯುತ್ತಿದ್ದಾನೆ.” ಎಂದೆಲ್ಲಾ ಬರೆದು ಸುದ್ದಿಯನ್ನು ಬಿತ್ತರಿಸಲಾಗುತ್ತಿದೆ.

- Advertisement -

ಆದರೆ ಪ್ರಚುರಪಡಿಸುತ್ತಿರುವ ನಂದಿ ಪ್ರತಿಮೆ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ್ದಲ್ಲ ಎಂದು ಕಂಡುಕೊಂಡಿದ್ದು ಇದು ಮಹಾರಾಷ್ಟ್ರದ ವಾಯ್ ನಲ್ಲಿರುವ ಕಾಶಿ ವಿಶ್ವೇಶರ ದೇವಾಲಯದ ವಿಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರತಿಮೆಯ ಚಿತ್ರವು ಈ ಮುಂಚೆಯೇ ಹಲವು ಕಡೆ ಕಂಡುಬಂದಿದ್ದು  ವರದಿಗಳ ಪ್ರಕಾರ, ಈ ಫೋಟೋವನ್ನು ಮೇ 28, 2012 ರಂದು ತೆಗೆದುಕೊಳ್ಳಲಾಗಿದ್ದು ನಂದಿ ಬುಲ್ ಪ್ರತಿಮೆಯು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಾಯ್ ನಲ್ಲಿರುವ ಕಾಶಿ ವಿಶ್ವೇಶ್ವರ ದೇವಾಲಯದಿಂದ ಎಂಬ ಶೀರ್ಷಿಕೆಯನ್ನೂ ಕೊಡಲಾಗಿದೆ. ಸ್ಟಾಕ್ ಫೋಟೋಗ್ರಫಿ ವೆಬ್ಸೈಟ್ ಅದೇ ಪ್ರತಿಮೆಯ ಫೋಟೋವನ್ನು ಹೊಂದಿದ್ದು ಇದನ್ನು ಆಗಸ್ಟ್ 1, 2011 ರಂದು ಅಪ್ಲೋಡ್ ಮಾಡಲಾಗಿದೆ.

ಹೀಗಾಗಿ, ವೈರಲ್ ಚಿತ್ರದಲ್ಲಿರುವ ನಂದಿ ವಿಗ್ರಹವು ವಾಸ್ತವವಾಗಿ ಮಹಾರಾಷ್ಟ್ರದ ವಾಯ್ ನಿಂದ ಬಂದಿದೆಯೇ ಹೊರತು ಉತ್ತರ ಪ್ರದೇಶದ ವಾರಣಾಸಿಯಿಂದಲ್ಲ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂಬುವುದು ಸ್ಪಷ್ಟವಾಗಿದೆ.

Join Whatsapp