ಉದ್ಯೋಗಿಗಳಿಗೆ ಕಾರು ಮತ್ತು ಬೈಕ್ ಗಳನ್ನು ಉಡುಗೊರೆಯಾಗಿ ನೀಡಿದ ಐಟಿ ಕಂಪೆನಿ..!

Prasthutha|

ಚೆನ್ನೈ: ಚೆನ್ನೈನ ಐಟಿ ಕಂಪನಿ ಟೀಮ್ ಡೀಟೆಲಿಂಗ್ ಸಲ್ಯೂಶನ್ಸ್ ದೀಪಾವಳಿ ಹತ್ತಿರ ಬರುತ್ತಿದ್ದಂತೆ ತನ್ನ ಉದ್ಯೋಗಿಗಳಿಗೆ ಬೆಲೆಬಾಳುವ ಉಡುಗೊರೆಗಳನ್ನು ನೀಡಿ ಅಚ್ಚರಿ ಮೂಡಿಸಿದೆ.

- Advertisement -


ದುಬಾರಿ ಉಡುಗೊರೆಗಳನ್ನು ಪಡೆದ ನೌಕರರ ಮುಖದಲ್ಲಿ ಆಶ್ಚರ್ಯ ಮತ್ತು ಸಂತೋಷ ತುಂಬಿದೆ.


ಕಂಪನಿಯ ಯಶಸ್ಸಿಗೆ ಕಾರಣರಾದ ನೌಕರರಿಗೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಕಾರು ಹಾಗೂ ಬೈಕ್ ಗಳನ್ನು ಉಡುಗೊರೆ ನೀಡಿದೆ. 28 ಕಾರುಗಳು ಮತ್ತು 29 ಬೈಕ್ ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.

- Advertisement -


ಮರ್ಸಿಡಿಸ್ ಬೆಂಜ್, ಮಾರುತಿ ಸುಜುಕಿ ಮತ್ತು ಹ್ಯುಂಡೈನಂತಹ ಐಷಾರಾಮಿ ಕಾರುಗಳನ್ನು ಸಹ ಒಳಗೊಂಡಿದೆ. ದೀಪಾವಳಿ ಮುನ್ನವೇ ಕಂಪನಿಯು ನೌಕರರ ಮನ ಮತ್ತು ಮನೆ ಎರಡನ್ನು ಬೆಳಗಿಸಿದೆ. ಉಡುಗೊರೆಯಾಗಿ ಬಂದ ವಾಹನಗಳನ್ನು ನೋಡಿ ನೌಕರರು ಫುಲ್ ಖುಷಿಯಾಗಿದ್ದಾರೆ.


ಉದ್ಯೋಗಿಗಳು ಕಂಪನಿಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಬದ್ಧತೆ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದಾರೆ ಎಂದು ಟೀಮ್ ಡಿಟೇಲಿಂಗ್ ಸಲ್ಯೂಶನ್ಸ್ ಎಂಡಿ ಶ್ರೀಧರ್ ಕಣ್ಣನ್ ಹೇಳಿದ್ದಾರೆ. ಈ ಹಿಂದೆಯೂ ನೌಕರರಿಗೆ ದ್ವಿಚಕ್ರ ವಾಹನ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರತಿ ವರ್ಷ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ 28 ಕಾರು ಹಾಗೂ 29 ಬೈಕ್ ಗಳನ್ನು ನೀಡಲಾಗಿದೆ. ಈ ಹಿಂದೆ ತಮ್ಮ ಉದ್ಯೋಗಿಗಳಿಗೆ ಮದುವೆ ಸಮಯದಲ್ಲಿ 50 ಸಾವಿರ ನೀಡುತ್ತಿದ್ದೆವು, ಈಗ ಅದನ್ನು 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಂಪನಿಯಲ್ಲಿ ಉತ್ತಮ ಕೆಲಸದ ವಾತಾವರಣ ಮತ್ತು ಕೆಲಸದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಈ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಕಣ್ಣನ್ ಹೇಳಿದ್ದಾರೆ.



Join Whatsapp