ನೆಲ್ಲೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ವೀಕ್ಷಣಾ ಉಪಗ್ರಹ-8 (EOS-8) ನ್ನು ಉಡಾವಣೆ ಮಾಡಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ “ಎಸ್ ಎಸ್ ಎಲ್ ವಿ ಯ ಮೂರನೇ ಅಭಿವೃದ್ಧಿ ವಾಹಕ ಹಾರಾಟ ಯಶಸ್ವಿಯಾಗಿದೆ.
SSLV-D3 ನಿಖರವಾಗಿ EOS-08 ನ್ನು ಕಕ್ಷೆಗೆ ಸೇರಿಸಿತು. ಇದು ISRO/DOS ನ SSLV ಅಭಿವೃದ್ಧಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ತಂತ್ರಜ್ಞಾನ ವರ್ಗಾವಣೆಯೊಂದಿಗೆ, ಭಾರತೀಯ ಉದ್ಯಮ ಮತ್ತು ಎನ್ ಎಸ್ ಐಎಲ್ ಇಂಡಿಯಾ ಈಗ ಎಸ್ ಎಸ್ ಎಲ್ ವಿಯನ್ನು ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ಉತ್ಪಾದಿಸುತ್ತದೆ ಎಂದಿದ್ದಾರೆ.
ಇಸ್ರೋ ಪ್ರಕಾರ, ಉಡಾವಣೆಗೆ ಕಾರಣವಾಗುವ ಆರೂವರೆ ಗಂಟೆಗಳ ಕ್ಷಣಗಣನೆಯು ಇಂದು ಮಧ್ಯರಾತ್ರಿ ಬಳಿಕ 2.47 ಕ್ಕೆ ಪ್ರಾರಂಭವಾಯಿತು. ಇದು SSLV-D3/EOS-08 ಮಿಷನ್ನ ಮೂರನೇ ಮತ್ತು ಅಂತಿಮ ಅಭಿವೃದ್ಧಿ ವಾಹಕವಾಗಿದೆ. ಬಾಹ್ಯಾಕಾಶ ನೌಕೆಯನ್ನು ಒಂದು ವರ್ಷದ ಅವಧಿಗೆ ವಿನ್ಯಾಸಗೊಳಿಸಲಾಗಿದೆ.
SSLV-D3/EOS-08 Mission
— ISRO (@isro) August 16, 2024
Tracking images 📸 pic.twitter.com/1TSVx19ZDk