ವೆಸ್ಟ್ ಬ್ಯಾಂಕ್: ಫೆಲೆಸ್ತೀನ್ ನಾಗರಿಕರು ವಾಸಿಸುತ್ತಿರುವ ಶಿಬಿರಗಳ ಮೇಲೆ ಇಸ್ರೇಲ್ ಸೇನಾ ಪಡೆ ದಾಳಿ ನಡೆಸಿದ್ದು, 10 ಮಂದಿ ಫೆಲೆಸ್ತೀನ್ ನಾಗರಿಕರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ನಬ್ಲಸ್ನಲ್ಲಿ ನಡೆದ ಸೇನಾ ಹತ್ಯಾಕಾಂಡದಲ್ಲಿ ಹತ್ತು ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಸುಮಾರು 100 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಫೆಲೆಸ್ತೀನ್ ಮೂಲಗಳು ತಿಳಿಸಿವೆ.
14 ವರ್ಷದ ಬಾಲಕ ಮತ್ತು 72 ವರ್ಷದ ವೃದ್ಧ ಸೇರಿದಂತೆ ಅಮಾಯಕರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.