ಗಾಝಾ ಮೇಲೆ ಇಸ್ರೇಲ್ ವಾಯು ದಾಳಿ | 33 ಫೆಲೆಸ್ತೀನ್ ನಾಗರಿಕರು ಬಲಿ

Prasthutha|

ಗಾಝಾ ನಗರ: ಗಾಝಾ ನಗರದ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ಕನಿಷ್ಠ 33 ಫೆಲೆಸ್ತೀನಿಯರು ಹತರಾಗಿದ್ದಾರೆ.

- Advertisement -

ದಾಳಿಯಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಹಮಾಸ್‌ ಸಂಘಟನೆಯ ಹಿರಿಯ ನಾಯಕ ಯಹ್ಯಾ ಸಿನ್ವಾರ್‌ ಮತ್ತು ಅವರ ಸಹೋದರ ಮುಹಮ್ಮದ್‌ ಅವರ ಮನೆಗಳ ಮೇಲೆಯೂ ದಾಳಿ ನಡೆಸಿ ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಬ್ರಿಗೇಡಿಯರ್‌ ಜನರಲ್‌ ಹಿದಾಯಿ ಜಿಲ್ಬರ್‌ಮನ್‌ ಹೇಳಿದ್ದಾರೆ.

- Advertisement -

ಇಸ್ರೇಲ್‌ ಮತ್ತು ಹಮಾಸ್‌ ಸಂಘಟನೆ ನಡುವೆ ಕಳೆದ ವಾರ ಆರಂಭವಾದ ಘರ್ಷಣೆಯ ಬಳಿಕ ಇದು ಅತಿ ದೊಡ್ಡ ದಾಳಿಯಾಗಿದೆ.

ಕಟ್ಟಡಗಳು, ರಸ್ತೆಗಳು ಹಾನಿಯಾಗಿರುವ ಚಿತ್ರಗಳನ್ನು ಗಾಝಾ ನಿವಾಸಿಗಳು, ಪತ್ರಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ವೈಮಾನಿಕ ದಾಳಿಯಿಂದಾಗಿ ನಗರದ ಮುಖ್ಯರಸ್ತೆಯಲ್ಲಿ ಕಂದಕ ಸೃಷ್ಟಿಯಾಗಿ, ನಗರದ ಬೃಹತ್‌ ಆಸ್ಪತ್ರೆ ಶಿಫಾಕ್ಕೆ ಇರುವ ಸಂಪರ್ಕ ಕಡಿದು ಹೋಗಿದೆ.

ಶನಿವಾರ 12 ಅಂತಸ್ತಿನ ಕಟ್ಟಡದ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಈ ಕಟ್ಟಡದಲ್ಲಿ ದಿ ಅಸೋಸಿಯೇಟೆಡ್‌ ಪ್ರೆಸ್, ಅಲ್‌ ಜಝೀರಾ ಸೇರಿದಂತೆ ಹಲವು ಪ್ರಮುಖ ಮಾಧ್ಯಮ ಸಂಸ್ಥೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಈ ದಾಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇಸ್ರೇಲ್‌ ತನ್ನ ಸ್ವಯಂ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇಸ್ರೇಲಿನ ಆಕ್ರಮಣವನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಸಮರ್ಥಿಸಿಕೊಂಡಿದ್ದಾರೆ.

Join Whatsapp