ರಮಲ್ಲಾ ಜುಲೈ 28: ಪೆಲೆಸ್ತೀನ್ ಉತ್ತರ ಪಶ್ಚಿಮ ದಂಡೆಯ ನಬ್ಲಸ್ ನಗರ ಬಳಿ ಇಸ್ರೇಲ್ ಸೈನಿಕರು ಮಂಗಳವಾರ ರಾತ್ರಿ ಫೆಲೆಸ್ತೀನ್ ವ್ಯಕ್ತಿಯೊಬ್ಬರನ್ನು ಮಾಡಿದ್ದಾರೆಂದು ಫೆಲೇಸ್ತೀನಿಯನ್ ಮಾಧ್ಯಮ ವರದಿ ಮಾಡಿದೆ. ಬೀಟಾ ಗ್ರಾಮದ ನಿವಾಸಿಯಾದ ಶಾಡಿ ಇಸ್ಲೀಮ್ (41) ಎಂಬ ಫೆಲೆಸ್ತೀನ್ ನಾಗರೀಕನನ್ನು ಇಸ್ರೇಲ್ ಸೈನಿಕರು ಗುಂಡು ಹಾರಿಸಿ ಹತ್ಯೆ ಮಾಡಿದೆಯೆಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಹೇಳಿದೆ.
ಘಟನೆಗೆ ಸಂಬಂದಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ಇಸ್ರೇಲ್ ಸರ್ಕಾರ ನಿರಾಕರಿಸಿದೆ. ಇಸ್ರೇಲ್ ಸೈನ್ಯವು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಸ್ರೇಲ್ ವಸಾಹತು ಯೋಜನೆಗಳೊಂದಿಗೆ ಪಶ್ಚಿಮ ದಂಡೆಯ ಬೀಟಾ ಎಂಬಲ್ಲಿಗೆ ಸ್ಥಳಾಂತರವಾಗುವುದನ್ನು ವಿರೋಧಿಸಿ ಕಳೆದ ಕೆಲವು ವಾರಗಳಿಂದ ಫೆಲೆಸ್ತೀನ್ ಜನತೆ ಪ್ರತಿಭಟನೆ ನಡೆಸುತ್ತಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಫೆಲೆಸ್ತೀನ್ ಪ್ರಧಾನಿ ಮೊಹಮ್ಮದ್ ಇಶ್ತಾಯೆಯವರು ಇತ್ತೀಚಿನ ದಿನಗಳಲ್ಲಿ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನ್ ಜನತೆಯ ಮೇಲೆ ಇಸ್ರೇಲ್ ಸೈನ್ಯ ಮತ್ತು ವಸಾಹತುಗಾರರ ದಾಳಿ ವ್ಯಾಪಕವಾಗುತ್ತಿದೆಯೆಂದು ತಿಳಿಸಿದ್ದಾರೆ.