ಪ್ರತಿಭಟನೆಗೆ ಬೆದರಿ ನ್ಯಾಯಾಂಗ ಸುಧಾರಣೆ ನಿರ್ಣಯವನ್ನು ಕೈಬಿಟ್ಟ ಇಸ್ರೇಲ್ ಪ್ರಧಾನಿ ನೇತಾನ್ಯೇಹು

Prasthutha|

ಇಸ್ರೇಲಿನಲ್ಲಿ ನ್ಯಾಯಾಂಗ ಕೂಲಂಕಷ ಪರಿಶೀಲನೆ ನಿಯಮವನ್ನು ಜಾರಿಗೆ ತಂದುದರ ವಿರುದ್ಧ ದೇಶದೆಲ್ಲೆಡೆ ಭಾರೀ ಪ್ರತಿಭಟನೆ ನಡೆದುದರಿಂದ ಪ್ರಧಾನಿ ಬೆಂಜಮಿನ್ ನೇತಾನ್ಯೇಹು ಅವರು ಆ ನಿರ್ಣಯವನ್ನೇ ಕೈಬಿಟ್ಟಿದ್ದಾರೆ.

- Advertisement -


ಬೆನ್ ಗುರಿಯನ್ ಅಂತಾಆರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ನಿಲ್ಲಿಸಲಾಗಿತ್ತು. ನಾನಾ ದೇಶಗಳು ಇಸ್ರೇಲಿ ರಾಯಭಾರ ಕಚೇರಿಗಳು ಪ್ರತಿಭಟನಕಾರರಿಗೆ ಬೆಂಬಲವಾಗಿ ಕೆಲಸ ನಿಲ್ಲಿಸಿದ್ದವು.
ಅಂದಾಜು 80,000 ಸರಕಾರ ವಿರೋಧಿ ಪ್ರತಿಭಟನಕಾರರು ಜೆರುಸಲೇಮ್’ನ ಕ್ನೆಸೆಟ್ ಮತ್ತು ಹಾರೆಟ್ಜ್ ಗಳಲ್ಲಿ ಜಮಾಯಿಸಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
“ನಮಗೆ ಬೇರೊಂದು ದೇಶ ಇಲ್ಲ. ನಮಗೆ ಬೇರೆ ತಾಯಿ ನಾಡು ಎನ್ನುವುದೇ ಇಲ್ಲ. ನಮಗೆ ಬೇರೆ ದಾರಿಯೂ ಇಲ್ಲ. ಇದು ಜ್ಯೂಗಳ ಮತ್ತು ಪ್ರಜಾಪ್ರಭುತ್ವ ದೇಶವಷ್ಟೆ” ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಪ್ರತಿಪಕ್ಷ ನಾಯಕ ಬೆನ್ನಿ ಗಾಂತ್ಜ್ ಹೇಳಿದರು.


ನೇತಾನ್ಯೇಹು ಸರಕಾರದ ಮೈತ್ರಿಯ ಬಲ ಪಂಥೀಯರು ದೀರ್ಘ ಮಾತುಕತೆಯ ಹೋರಾಟಕ್ಕೆ ಕರೆ ನೀಡಿದರು.
ನ್ಯಾಯಾಂಗ ಸುಧಾರಣೆಯನ್ನು ಬೆಂಬಲಿಸಿ ಪ್ರತಿ ಪ್ರತಿಭಟನೆ ನಡೆಸಲು ಹಣಕಾಸು ಮಂತ್ರಿ ಬೆಜಾಲೆಲ್ ಸ್ಮೋಟ್ರಿಕ್ ಸೋಮವಾರ ಕರೆ ನೀಡಿದರಾದರೂ ಅದು ಫಲಿಸಲಿಲ್ಲ.
ಟೈಮ್ಸ್ ವರದಿಯಂತೆ ಅವರು “ಎಲ್ಲರೂ ಜೆರೂಸಲೇಮ್ ಗೆ ಬನ್ನಿ” ಎಂದು ಕರೆ ನೀಡಿದ್ದರು.
“ನಾವು ಪ್ರಜಾಪ್ರಭುತ್ವ ರಕ್ಷಣೆಯ ನ್ಯಾಯಾಂಗ ಸುಧಾರಣೆಯನ್ನು ಸುಮ್ಮನೆ ಕೈ ಬಿಡುವುದು ಸಾಧ್ಯವಿಲ್ಲ. ನಾವು ಹಿಂಸೆ, ಅರಾಜಕತೆ, ಮಿಲಿಟರಿ ಸೇವೆ ನಿರಾಕರಣೆ, ಅಂಧ ಚಳವಳಿಗಳಿಗೆಲ್ಲ ಹೆದರಲಾಗದು” ಎಂದೂ ಅವರು ಹೇಳಿದರು.

- Advertisement -


ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಮಂತ್ರಿ ಇತಮರ್ ಬೆನ್ ಗ್ವಿರ್ ಪ್ರತಿ ಪ್ರತಿಭಟನೆಗೆ ಬೆಂಬಲ ನೀಡಿದರು.
“ಇಂದು ನಾವು ಮಾತನಾಡದೆ ಕೂರಲಾಗದು. ಇಂದು ಬಲಪಂಥೀಯರೆ ಎದ್ದು ನಿಲ್ಲಿ. ಎಲ್ಲೆಡೆ ಹರಡಿಕೊಳ್ಳಿ” ಎಂದು ಅವರು ಬರೆದುದಲ್ಲದೆ, ಸೋಮವಾರ ಬೆಳಿಗ್ಗೆ ಕ್ನೆಸೆಟ್ ಹೊರಗಡೆ ಪೋಸ್ಟರ್ ಗಳನ್ನೂ ಹಾಕಿಸಿದರು.
ಸುಧಾರಣೆ ನಿಲ್ಲಿಸಿದರೆ ನಾನು ರಾಜೀನಾಮೆ ನೀಡುವೆ ಎಂದು ಬೆದರಿಸಿದ ಬೆನ್ ಗ್ವಿರ್ ಸರಕಾರವನ್ನು ಹೊರಗಿನಿಂದ ಬೆಂಬಲಿಸುವೆ ಎಂದೂ ಹೇಳಿದರು.
ಸೋಮವಾರ ಸಂಜೆಯಾಗುವಾಗ ಪ್ರಧಾನಿ ನೇತಾನ್ಯೇಹುರವರ ಆಲೋಚನೆ ಮಿಟುಕಿ ಮಸುಕಾಗತೊಡಗಿತು. ಅವರು ನ್ಯಾಯಾಂಗ ಸುಧಾರಣೆಯನ್ನು ಮುಂದೂಡುವುದಾಗಿ ಹೇಳಿದರು.
“ರಾಷ್ಟ್ರೀಯ ಜವಾಬುದಾರಿ ಹೊತ್ತು ಜನರು ದಂಗೆ ಏಳುವುದನ್ನು ತಪ್ಪಿಸಲು, ನಾನು ನ್ಯಾಯಾಂಗ ಸುಧಾರಣೆ ಮಸೂದೆಯ ಎರಡು ಮತ್ತು ಮೂರನೆಯ ನಿಯಮಗಳನ್ನು ಕೈ ಬಿಡುತ್ತೇನೆ” ಎಂದು ಅವರು ದೇಶದ ಜನಪ್ರತಿನಿಧಿಗಳಿಗೆ ತಿಳಿಸಿದರು.
ರಾಷ್ಟ್ರೀಯ ಹಿತಾಸಕ್ತಿಯಿಂದ ಮುಂದೂಡುವ ಮತ್ತು ಬಹತೇಕ ಕೈ ಬಿಡುವ ನಿರ್ಣಯವನ್ನು ಬೆನ್ ಗ್ವಿರ್ ಸಹ ಒಪ್ಪಿಕೊಂಡರು.

Join Whatsapp