ಇಸ್ರೇಲ್ ಭೀಕರ ದಾಳಿ: ಮಕ್ಕಳು ಸೇರಿದಂತೆ 274 ಪ್ಯಾಲೆಸ್ತೀನಿಯರು ಸಾವು

Prasthutha|

ಗಾಝಾ: ಇಸ್ರೇಲ್ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆಯ ನೆಪದಲ್ಲಿ ಭೀಕರ ದಾಳಿ‌ ನಡೆಸಿದ್ದು, ಮಕ್ಕಳು ಸೇರಿದಂತೆ 274 ಪ್ಯಾಲೆಸ್ತೀನ್ ಜನರು ಸಾವನ್ನಪ್ಪಿದ್ದಾರೆ.

- Advertisement -

ಇಸ್ರೇಲ್ ದಾಳಿಯಲ್ಲಿ ಒಟ್ಟಾರೆಯಾಗಿ 274 ಮಂದಿ ಸಾವನ್ನಪ್ಪಿದ್ದಾರೆ. 23 ಮಕ್ಕಳು ಮತ್ತು 11 ಮಹಿಳೆಯರು ಸೇರಿದಂತೆ 109 ಪ್ಯಾಲೆಸ್ಟೀನಿಯನ್ನರ ಶವಗಳನ್ನು ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಗಾಯಗೊಂಡಿರುವ 100ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ಯಾಲೇಸ್ತಿನ್ ವಕ್ತಾರ ಖಲೀಲ್ ದೆಘ್ರನ್ ತಿಳಿಸಿದ್ದಾರೆ.

ಅಮಾಯಕರ ಮಾರಣಹೋಮದ ಬಗ್ಗೆ ವಿಷಾದ ವ್ಯಕ್ತಪಡಿಸದ ಇಸ್ರೇಲ್, 4 ಒತ್ತೆಯಾಳುಗಳ ರಕ್ಷಣೆಯ ಬಗ್ಗೆ ಮಾತ್ರ ಹೇಳಿಕೆ ಬಿಡುಗಡೆ ಮಾಡಿದೆ. 26 ವರ್ಷದ ನೋಹ್ ಅರ್ಗಾಮಣಿ, 22 ವರ್ಷದ ಅಲ್ಮೊಗ್ ಮೀರ್ ಜಾನ್, 27 ವರ್ಷದ ಆಂಡ್ರೆ ಕೊಜ್ಲೋವ್ ಮತ್ತು 41 ವರ್ಷದ ಶ್ಲೋಮಿ ಝಿವ್ ಅವರನ್ನು ರಕ್ಷಿಸಲಾಗಿದೆ. ಇವರೆಲ್ಲಾ ಕಳೆದ 246 ದಿನಗಳಿಂದ ಹಮಾಸ್ ವಶದಲ್ಲಿದ್ದು, ಇದೀಗ ರಕ್ಷಿಸಲಾಗಿದೆ. ಅವರನ್ನು ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ.

Join Whatsapp