ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಮೃತರ ಸಂಖ್ಯೆ 16ಕ್ಕೆ ಏರಿಕೆ

Prasthutha|

ಬೈರುತ್: ದಕ್ಷಿಣ ಲೆಬನಾನ್ ನ ಪುರಸಭೆ ಕಚೇರಿಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

- Advertisement -


ದಕ್ಷಿಣ ಲೆಬನಾನ್ ನ ನಬಾತಿಹ್ ಪುರಸಭೆ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ 16 ಮಂದಿ ಬಲಿಯಾಗಿದ್ದು, 52 ಜನರು ಗಾಯಗೊಂಡಿದ್ದಾರೆ.


ಲೆಬನಾನ್ ಆರೋಗ್ಯ ಸಚಿವಾಲಯವು ನೀಡಿದ ವರದಿಯಲ್ಲಿ, ನಬಾತಿಹ್ ಪುರಸಭೆ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪುರಸಭೆಯ ಮೇಯರ್ ಕೂಡ ಮೃತಪಟ್ಟಿದ್ದಾರೆ. ಪುರಸಭೆಯ ಪ್ರಧಾನ ಕಚೇರಿ ಧ್ವಂಸಗೊಂಡಿದೆ.



Join Whatsapp