ಇಸ್ರೇಲ್ ಪ್ರಧಾನಿ ನೆತನ್ಯಾಹು ಮುಂದಿನ ವಾರದಲ್ಲಿ ಯುಎಇಗೆ ಭೇಟಿ

Prasthutha|

ದುಬೈ: ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೇಶದ ಹೊಸ ಸರ್ಕಾರದ ನಾಯಕರಾಗಿ ತಮ್ಮ ಮೊದಲ ವಿದೇಶಿ ಪ್ರವಾಸಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್’ಗೆ ಅಧಿಕೃತ ಭೇಟಿಯನ್ನು ನಿಗದಿಪಡಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

- Advertisement -


ನೆತನ್ಯಾಹು ಮುಂದಿನ ವಾರದಲ್ಲಿ ಯುಎಇಗೆ ಭೇಟಿ ನೀಡಬಹುದು ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ.
ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಶನಿವಾರ ನೇತನ್ಯಾಹು ಅವರಿಗೆ ಕರೆ ಮಾಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಅವರನ್ನು ಅಭಿನಂದಿಸಿದರು. ಉಭಯ ನಾಯಕರು ಒಪ್ಪಿಕೊಂಡಂತೆ ಯುಎಇಗೆ ನೆತನ್ಯಾಹು ಅವರ ಭೇಟಿ “ಶೀಘ್ರದಲ್ಲೇ ನಡೆಯಲಿದೆ” ಎಂದು ತಿಳಿಸಿದರು.
ಅವರ ಹಿಂದಿನ ಅಧಿಕಾರಾವಧಿಯಲ್ಲಿ, ನೆತನ್ಯಾಹು ಯುಎಸ್ ಬೆಂಬಲಿತ ಅಬ್ರಹಾಂ ಒಪ್ಪಂದಗಳಿಗೆ ಸಹಿ ಹಾಕಿದ್ದರು, ಇದು ಇಸ್ರೇಲ್, ಯುಎಇ, ಬಹ್ರೇನ್, ಮೊರಾಕೊ ಮತ್ತು ಸುಡಾನ್ ನಡುವಿನ ಸಂಬಂಧಗಳನ್ನು ಸಾಮಾನ್ಯಗೊಳಿಸಿತು.


ಬಹ್ರೇನ್ ಮತ್ತು ಸುಡಾನ್’ನೊಂದಿಗಿನ ಸಾಮಾನ್ಯೀಕರಣವು ನಿಧಾನವಾಗಿದ್ದರೂ, ಯುಎಇಯೊಂದಿಗೆ ಇಸ್ರೇಲ್’ನ ಸಂಬಂಧಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಇಸ್ರೇಲಿ ಪ್ರವಾಸಿಗರು ದುಬೈಗೆ ಆಗಮಿಸಿದ್ದಾರೆ ಮತ್ತು ಉಭಯ ದೇಶಗಳು ಕಳೆದ ವರ್ಷ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಅಕ್ರಮವೆಂದು ಪರಿಗಣಿಸಲಾದ ವೆಸ್ಟ್ ಬ್ಯಾಂಕ್’ನಲ್ಲಿ ವಸಾಹತುಗಳ ವಿಸ್ತರಣೆಯು ತನ್ನ ಸರ್ಕಾರದ ಮುಖ್ಯ ಗುರಿಗಳಲ್ಲಿ ಒಂದಾಗಿದೆ ಎಂದು ನೆತನ್ಯಾಹು ಈಗಾಗಲೇ ಹೇಳಿದ್ದಾರೆ.

- Advertisement -


ಮಾರ್ಚ್ 2021 ರಲ್ಲಿ ಯುಎಇಗೆ ಭೇಟಿ ನೀಡುವ ಅವರ ಪ್ರಯತ್ನವನ್ನು ಚುನಾವಣೆಗೆ ಕೆಲವೇ ದಿನಗಳ ಮೊದಲು ಕೆಲವರು ನೆತನ್ಯಾಹುವನ್ನು ಅಧಿಕಾರದಿಂದ ಕೆಳಗಿಳಿಸಲು ವಿದೇಶಾಂಗ ನೀತಿಯಲ್ಲಿ ತಂತ್ರವೆಸಗಿದ್ದರು. ಜೆರುಸಲೆಮ್’ನ ಅಲ್-ಅಕ್ಸಾ ಮಸೀದಿಗೆ ಜೋರ್ಡಾನ್ ಯುವರಾಜನ ಪ್ರವಾಸವನ್ನು ರದ್ದುಗೊಳಿಸಿದ ಇಸ್ರೇಲ್’ಗೆ ಪ್ರತೀಕಾರವಾಗಿ ಜೋರ್ಡಾನ್ ತನ್ನ ವಿಮಾನ ಹಾರಾಟದ ಮಾರ್ಗವನ್ನು ಅನುಮೋದಿಸಲು ವಿಳಂಬ ಮಾಡಿದ ನಂತರ ನೆತನ್ಯಾಹು ಪ್ರವಾಸವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು.

Join Whatsapp