ಗಾಝಾದ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನೆ ನಡೆಸಿದ ಬಾಂಬ್ ದಾಳಿ ಅಮಾನವೀಯ: ವೆಲ್ಫೇರ್ ಪಾರ್ಟಿ

Prasthutha|

ಬೆಂಗಳೂರು: ಗಾಝಾದ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನೆ ನಡೆಸಿದ ಬಾಂಬ್ ದಾಳಿ ಅಮಾನವೀಯವಾದುದು ಇದು ನರಮೇಧ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ ಹುಸೇನ್ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಮನುಷ್ಯತ್ವ ರಹಿತವಾದ ಈ ದುಷ್ಕ್ರತ್ಯದ ವಿರುದ್ದ ವಿಶ್ವದ ರಾಷ್ಟ್ರಗಳೇಕೆ ರಂಗಕ್ಕಿಳಿಯುತ್ತಿಲ್ಲ. ಹಮಾಸನ್ನು ಭಯೋತ್ಪಾದಕ ಸಂಘಟನೆಯೆಂದು ಬಿಂಬಿಸಲು ಶ್ರಮಿಸುತ್ತದೆ. ನಿಜವಾದ ಭಯೋತ್ಪಾದಕರು ಯಾರೆಂಬುದು ಬಹಿರಂಗವಾಗುತ್ತಿದೆ. ಇಸ್ರೇಲ್ ಸಹಿ ಹಾಕಿದ ಜಿನೀವ ಒಪ್ಪಂದದ ಅನುಸಾರವಾಗಿ ಹದಿನೈದು ವರ್ಷಗಳ ಒಳಗಿರುವ  ಆಸ್ಪತ್ರೆಯ ಸೌಲಭ್ಯ ವಂಚಿತ ಆಹಾರ ಉಡುಪು ಇಲ್ಲದೆ ಪರದಾಡುವ ಮಕ್ಕಳಿಗೆ ವಿಶೇಷ ಸಂರಕ್ಷಣೆ ನೀಡಬೇಕು. ಇದರ ಪಾಲನೆ ಇದ್ದ ಮಕ್ಕಳ ಮಹಿಳೆಯರ ನರಮೇಧ ನಿರಂತರ ನಡೆಯುತ್ತಿದೆ.  ಈ ದೌರ್ಜನ್ಯ ದಮನ ಕಾರಕ  ನೀತಿಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಖಂಡಿಸಿ ಕಠಿಣ ಕ್ರಮಕೈಗೊಳ್ಳಬೇಕು ಯಂದು ಅವರು ಅಗ್ರಹಿಸಿದರು.



Join Whatsapp