ಗಾಝಾ ಮಕ್ಕಳ ಬಗ್ಗೆ ತಪ್ಪಾದ ಮಾಹಿತಿ ವೀಡಿಯೋ ಹಂಚಿ ಸಿಕ್ಕಿಬಿದ್ದ ಇಸ್ರೇಲ್ ರಾಯಭಾರಿ!

Prasthutha|

ನವದೆಹಲಿ: ಫೆಲೆಸ್ತೀನ್ ಮಕ್ಕಳು ನಕಲಿ ಗಾಯಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಮಧ್ಯಪಶ್ಚಿಮ ಭಾರತಕ್ಕೆ ಇಸ್ರೇಲ್‌ನ ಪ್ರಧಾನ ರಾಯಭಾರಿಯಾಗಿರುವ ಕೊಬ್ಬಿ ಶೋಶನಿ ವೀಡಿಯೋ ಹಂಚಿದ್ದಾರೆ. ಪ್ಯಾಲೆಸ್ತೀನ್ ಮಕ್ಕಳ ಬಗ್ಗೆ ತಪ್ಪಾಗಿ ಆರೋಪಿಸಿರುವ ಈ ವೀಡಿಯೊವನ್ನು x ಸಾಮಾಜಿಕ ಮಾಧ್ಯಮದಲ್ಲಿ ಅವರು ಹಂಚಿಕೊಂಡಿದ್ದಾರೆ. “ಬಾಲಿವುಡ್, ನಿಮಗೆ ಗಾಝಾದಲ್ಲಿ ನಕಲಿ ಸ್ಪರ್ಧೆಯಿದೆ” ಎಂಬ ಶೀರ್ಷಿಕೆಯನ್ನೂ ವೀಡಿಯೋ ಜೊತೆ ಬರೆಯಲಾಗಿದೆ. ಈ ವೀಡಿಯೋಗಳನ್ನು ಇಸ್ರೇಲ್ ಬೆಂಬಲಿಗರು ಮಾಧ್ಯಮಗಳಲ್ಲಿ ವ್ಯಾಪಕ ಷೇರ್ ಮಾಡಿದ್ದಾರೆ.

- Advertisement -

ಆದರೆ, ಶೋಶನಿ ಹಂಚಿಕೊಂಡಿರುವ ವೀಡಿಯೊದಲ್ಲಿ ರೆಡ್ ಕ್ರೆಸೆಂಟ್ ಕಾರ್ಯಕರ್ತರು ಬಾಲಕಿಯೊಬ್ಬಳನ್ನು ರಕ್ಷಿಸುತ್ತಿದ್ದು, ಇತರರು ಕ್ಯಾಮೆರಾ ಹಿಡಿದುಕೊಂಡಿರುತ್ತಾರೆ. ವಾಸ್ತವದಲ್ಲಿ ಇದು ಗಾಝಾದ ಮಕ್ಕಳ ವೀಡಿಯೋ ಅಲ್ಲ. ಇದು ಲೆಬನನ್ ನ ಕಿರುಚಿತ್ರದ ಶೂಟಿಂಗ್ ಸಂದರ್ಭದ್ದಾಗಿದೆ‌.‌ ಲೆಬೆನನ್‌ನ ಕಿರುಚಿತ್ರದ ಶೂಟಿಂಗ್ ವೀಡಿಯೋವನ್ನು ಪ್ಯಾಲೆಸ್ತೀನ್ ಮಕ್ಕಳು ಗಾಯಗೊಂಡಿರುವಂತೆ ಬಿಂಬಿಸಲು ಮಾಡಿದ ನಾಟಕ ಎಂದು ಭಾರತದಲ್ಲಿನ ಇಸ್ರೇಲ್‌ ರಾಯಭಾರಿ ಹಂಚಿಕೊಂಡಿದ್ದಾರೆ.

ಶೋಶನಿ ಹಂಚಿಕೊಂಡಿರುವ ಪೋಸ್ಟ್ ದಾರಿ ತಪ್ಪಿಸುವಂಥದು ಎಂದು x ಸಾಮಾಜಿಕ ಮಾಧ್ಯಮ ವೇದಿಕೆಯು ಆಕ್ಷೇಪಿಸಿದೆ. ಮಾತ್ರವಲ್ಲ, X ವೀಡಿಯೊದೊಂದಿಗೆ ವಾಸ್ತವವನ್ನು ಬರೆದು ಲಗತ್ತಿಸಿದ್ದು, ಇಸ್ರೇಲ್ ರಾಯಭಾರಿಯ ದುರುದ್ದೇಶ ಅನಾವರಣಗೊಳಿಸಿದೆ.

- Advertisement -

ಖ್ಯಾತ ಫ್ಯಾಕ್ಟ್‌ ಚೆಕ್‌ ಸುದ್ದಿ ಸಂಸ್ಥೆ ಆಲ್ಟ್ ನ್ಯೂಸ್ ಕೂಡ ಶೋಶನಿ ವೀಡಿಯೊದ ಅಸಲೀಯತ್ತನ್ನು ಬಹಿರಂಗಪಡಿಸಿ , ಇದು ನಕಲಿ ಸುದ್ದಿ ಎಂದು ಪ್ರತಿಪಾದಿಸಿದೆ.

ಶೋಶನಿ ಇದೇ ಪ್ರಥಮ ಬಾರಿಯೇನು ವಿವಾದ ಸೃಷ್ಟಿಸುತ್ತಿಲ್ಲ. ಇಸ್ರೇಲ್-ಫೆಲೆಸ್ತೀನ್ ನಡುವೆ ಸಂಘರ್ಷ ಪ್ರಾರಂಭವಾದಾಗಿನಿಂದಲೂ ಪ್ಯಾಲೆಸ್ತೀನ್ ವಿರುದ್ಧ ದಾರಿ ತಪ್ಪಿಸುವ ಹೇಳಿಕೆ, ವೀಡಿಯೊ ತುಣುಕುಗಳನ್ನು ಹಂಚುವುದರಲ್ಲಿ ಶೋಶನಿ ತೊಡಗಿಸಿಕೊಂಡಿದ್ದಾರೆ. ಪ್ಯಾಲೆಸ್ತೀನ್ ವಿರುದ್ಧ ದಾರಿ ತಪ್ಪಿಸುವ ಆರೋಪಗಳನ್ನು, ಅಸಂಬದ್ಧ ವೀಡಿಯೋಗಳನ್ನು ಇತರ ಇಸ್ರೇಲ್ ಅಧಿಕಾರಿಗಳು ಕೂಡ ಹಂಚಿದ್ದಾರೆ.



Join Whatsapp