ಗಾಝಾದ ಹಮಾಸ್‌ ನೆಲೆಗಳ ಮೇಲೆ ಇಸ್ರೇಲ್‌ ದಾಳಿ

Prasthutha|

ಟೆಲ್‌ ಅವೀವ್‌ : ಗಾಝಾ ಪಟ್ಟಿಯಲ್ಲಿ ಹಮಾಸ್‌ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿರುವುದನ್ನು ಇಸ್ರೇಲ್‌ ರಕ್ಷಣಾ ಪಡೆಗಳು ದೃಢಪಡಿಸಿವೆ. ಸ್ಫೋಟಕ ಬಲೂನ್‌ ಗಳ ದಾಳಿಯನ್ನು ತಡೆಯಲು ಈ ದಾಳಿ ನಡೆಸಲಾಗಿದೆ ಎಂದು ಅವು ತಿಳಿಸಿವೆ.

- Advertisement -

ಗಾಝಾದಿಂದ ಇಸ್ರೇಲ್‌ ಮೇಲೆ ಸ್ಫೋಟಕ ಬಲೂನ್‌ ಗಳನ್ನು ಉಡಾವಣೆ ಮಾಡಿದುದಕ್ಕೆ ಪ್ರತಿಯಾಗಿ, ಗಾಝಾದಲ್ಲಿ ಹಮಾಸ್‌ ಗಳಿಗೆ ಸೇರಿದ ನೆಲೆಗಳ ಮೇಲೆ ನಾವು ರಾಕೆಟ್‌ ದಾಳಿ ಮತ್ತು ಸೇನಾ ಕಾರ್ಯಾಚರಣೆ ಮಾಡಿದ್ದೇವೆ ಎಂದು ಐಡಿಎಫ್‌ ಟ್ವೀಟ್‌ ಮಾಡಿದೆ.

ದಕ್ಷಿಣ ಇಸ್ರೇಲ್‌ ನಲ್ಲಿ ನಿನ್ನೆ ಕನಿಷ್ಠ ಎಂಟು ಮತ್ತು ಮೊನ್ನೆ ನಾಲ್ಕು ಬಲೂನ್‌ ಸ್ಫೋಟಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಗಾಝಾದ ಬೈತ್‌ ಲಾಹಿಯಾದ ಹಮಾಸ್‌ ನಿಯಂತ್ರಿತ ಕಟ್ಟಡವೊಂದರ ಮೇಲೆ ಇಸ್ರೇಲಿ ದಾಳಿ ನಡೆದಿದೆ. ಅಲ್ಲದೆ, ಉತ್ತರ ಗಾಝಾದಲ್ಲಿ ಹಮಾಸ್‌ ನಿಯಂತ್ರಣದ ಆಡಳಿತಾತ್ಮಕ ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಫೆಲೆಸ್ತೀನಿಯನ್‌ ಮಾಧ್ಯಮಗಳು ವರದಿ ಮಾಡಿವೆ.

Join Whatsapp