ಗಾಝಾದಲ್ಲಿ‌ ನಿರಾಶ್ರಿತರ ಶಿಬಿರದಲ್ಲಿ ಮತ್ತೆ ಇಸ್ರೇಲ್ ದಾಳಿ: ಅಲ್ ಜಝೀರಾ ಸಿಬ್ಬಂದಿ ಕುಟುಂಬದ 19 ಸೇರಿ 50 ಮಂದಿ ಮೃತ

Prasthutha|

- Advertisement -

ಗಾಝಾ: ಇಸ್ರೇಲ್ ಸೇನೆಯಿಂದ ನಾಗರಿಕ ಹತ್ಯೆ ಮುಂದುವರೆದಿದ್ದು, ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ. ಇದರಲ್ಲಿ ಅಲ್‌ ಜಝೀರಾ ಮಾದ್ಯಮ ಸಿಬ್ಬಂದಿಯ ಕುಟುಂಬದ 19 ಸದಸ್ಯರು ಸೇರಿದ್ದಾರೆ.

ಗಾಝಾದ ಜಬಾಲಿಯಾ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ವಾಯು ದಾಳಿಯಲ್ಲಿ ಗಾಝಾದ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಬ್ರಾಡ್‌ ಕಾಸ್ಟಿಂಗ್ ಇಂಜಿನಿಯರ್‌ ಮೊಹಮದ್ ಅಬು ಅಲ್-ಕುಮ್ಸಾನ್ ತನ್ನ ಸಹೋದರ, ಇಬ್ಬರು ಸಹೋದರಿಯರು ಮತ್ತು 8 ಸೋದರಳಿಯರು ಮತ್ತು ಸೊಸೆಯಂದಿರನ್ನು ಕಳೆದುಕೊಂಡಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.

- Advertisement -

ಕೆಲವು ದಿನಗಳ ಹಿಂದೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾ ವರದಿಗಾರ ದಹದೌಹ್ ಅವರು ಪತ್ನಿ ಮಗ, ಮಗಳು ಮತ್ತು ಮೊಮ್ಮಗನನ್ನು ಕಳೆದುಕೊಂಡಿದ್ದರು.

ಇಸ್ರೇಲ್ ತನ್ನ ಹೇಳಿಕೆಯಲ್ಲಿ ನಾಗರಿಕರ ಹತ್ಯೆಯನ್ನು ತಿರುಚಿದ್ದು, ಹಮಾಸ್ ಕಮಾಂಡರ್ ಇಬ್ರಾಹಿಂ ಬಿಯಾರಿ ಸೇರಿದಂತೆ ಹಲವಾರು ಹಮಾಸ್ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿದೆ. ಆದರೆ ಹಮಾಸ್, ಮೃತರಾದವರಲ್ಲಿ ಯಾರೂ ನಮ್ಮ ನಸಯಕರಾಗಲಿ, ಕಾರ್ಯಕರ್ತರಾಗಲಿ ಇರಲಿಲ್ಲ ಎಂದಿದೆ.

Join Whatsapp